LATEST NEWS
ಏರಿಕೆಯಲ್ಲಿ ಕೊರೊನಾ ಪ್ರಕರಣ ಕುಂದಾಪುರದಲ್ಲಿ 400 ಬೆಡ್ ಆಸ್ಪತ್ರೆ….!!
ತೀವ್ರಗತಿಯಲ್ಲಿ ಏರಿಕೆಯಲ್ಲಿ ಕೊರೊನಾ ಪ್ರಕರಣ ಕುಂದಾಪುರದಲ್ಲಿ 400 ಬೆಡ್ ಆಸ್ಪತ್ರೆ….!!
ಉಡುಪಿ ಜೂನ್ 2: ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರಲ್ಲಿ ಕುಂದಾಪುರ ಮತ್ತು ಬೈಂದೂರಿನ ಜನರೇ ಹೆಚ್ಚಿದ್ದು, ಈ ಹಿನ್ನಲೆ ಕುಂದಾಪುರದಲ್ಲಿ ಸುಮಾರು 400 ಬೆಡ್ ಆಸ್ಪತ್ರೆ ಮಾಡಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಉಡುಪಿ ಜಿಲ್ಲೆಗೆ ಹೊರ ರಾಜ್ಯ, ಜಿಲ್ಲೆಗಳಿಂದ ಸುಮಾರು ಎಂಟು ಸಾವಿರಕ್ಕಿಂತಲೂ ಅಧಿಕ ಜನ ಆಗಮಿಸಿದ್ದು ಅದರಲ್ಲಿ ಕೆಲವರನ್ನು ಮಾತ್ರ ಹದಿನಾಲ್ಕು ದಿನ ಕ್ವಾರಂಟೈನ್ ಮಾಡಲಾಗಿತ್ತು. ಮತ್ತೆ ಉಳಿದವರನ್ನುಏಳು ದಿನದ ಕ್ವಾರಂಟೈನ್ ಮಾಡಲಾಗಿದೆ ಎಂದರು.
ಆದರೆ ಕ್ವಾರಂಟೈನ್ ನಲ್ಲಿ ಇರುವಾಗ ಎಲ್ಲರ ಸ್ಯಾಂಪಲ್ ತೆಗಯಲಾಗಿದ್ದು ಅವರು ಸ್ಯಾಂಪಲ್ ವರದಿ ಈಗ ಬರುತ್ತಿದ್ದು, ಕಳೆಡೆರದು ದಿನಗಳಲ್ಲಿ ಮೂರು ಸಾವಿರಕ್ಕೂ ಅಧಿಕ ವರದಿ ಬಂದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಅನೇಕರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಪಾಸಿಟಿವ್ ಬಂದಿರುವ ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಕುಂದಾಪುರದಲ್ಲಿ ಇನ್ನೂರು ಬೆಡ್ ನ ಆಸ್ಪತ್ರೆ ಇದ್ದು, ಇನ್ನೂ ನೂರು ಬೆಡ್ ನ ಆಸ್ಪತ್ರೆಯ ಅವಕಾಶ ಕುಂದಾಪುರದಲ್ಲಿದೆ. ಸದ್ಯ ಕುಂದಾಪುರ ತಾಲೂಕು ಆಸ್ಪತ್ರೆಯನ್ನು ಕೊವಿಡ್ ಆಸ್ಪತ್ರೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಮಹಾರಾಷ್ಟ್ರದಿಂದ ಬೈಂದೂರಿಗೆ 2500 ಜನ ಬಂದಿದ್ದೂ ಬೈಂದೂರಿನಲ್ಲಿಯೂ ಸಾಕಷ್ಟು ಪ್ರಕರಣ ಕಂಡು ಬರುತ್ತಿದೆ. ಈ ಹಿನ್ನಲೆ ಕೊಲ್ಲೂರಿನಲ್ಲಿರುವ ಲಲಿತಾಂಬಿಕ ವಸತಿಗೃಹವನ್ನು ಕೊವಿಡ್ ಆಸ್ಪತ್ರೆ ಮಾಡಲಾಗಿದೆ. ಅಲ್ಲಿ ಕೊರೊನಾದ ಯಾವುದೇ ಲಕ್ಷಣ ಇಲ್ಲದಿರುವವರಿಗೆ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.