Connect with us

LATEST NEWS

ಉಡುಪಿಯಲ್ಲಿ ಇಂದು 200 ಕ್ಕೂ ಅಧಿಕ ಕೊರೊನಾ ಪ್ರಕರಣ ದಾಖಲಾಗಲಿದೆ – ಆರ್ . ಅಶೋಕ್

ಉಡುಪಿಯಲ್ಲಿ ಇಂದು 200 ಕ್ಕೂ ಅಧಿಕ ಕೊರೊನಾ ಪ್ರಕರಣ ದಾಖಲಾಗಲಿದೆ – ಆರ್ . ಅಶೋಕ್

ಉಡುಪಿ ಜೂನ್ 2: ಉಡುಪಿಯಲ್ಲಿ ಇಂದು ಅತ್ಯಧಿಕ ಸಂಖ್ಯೆಯಲ್ಲಿ ಕೊರೊನಾ ಪ್ರಕರಣಗಳು ದಾಖಲಾಗಲಿದ್ದು, ಸಂಖ್ಯೆ 200 ದಾಟಲಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.

ಕೃಷ್ಣ ನಗರಿ ಉಡುಪಿಗೆ ಮಹಾರಾಷ್ಟ್ರ, ಹೊರ ರಾಜ್ಯ, ಹೊರ ದೇಶಗಳಿಂದ ಬಂದಿರುವರಿಂದ ಕೊರೊನಾ ಸಂಖ್ಯೆ ಏರಿಕೆಯಾಗುತ್ತಲೆ ಇದ್ದು, ನಿನ್ನೆ ದಾಖಲೆಯ 73 ಮಂದಿಗೆ ಕೊರೊನಾ ಸೊಂಕು ದೃಢಪಟ್ಟಿತ್ತು. ಆದರೆ ಕಂದಾಯ ಸಚಿವ ಆರ್ ಅಶೋಕ್ ಹೇಳಿಕೆ ಪ್ರಕಾರ ಇಂದು ಒಂದೇ ದಿನ ಸೊಂಕಿತರ ಸಂಖ್ಯೆ 200 ರ ಗಡಿ ದಾಟಲಿದೆ ಎಂದು ಹೇಳಲಾಗಿದೆ.

ಇಂದು ಉಡುಪಿಗೆ ಆಗಮಿಸಿದ್ದ ಕಂದಾಯ ಸಚಿವ ಆರ್. ಅಶೋಕ್ ಮಾದ್ಯಮದವರೊಂದಿಗೆ ಮಾತನಾಡಿ ಕರ್ನಾಟಕಕ್ಕೆ ಈಗಾಗಲೇ 15 ರಿಂದ 20 ಸಾವಿರ ಜನ ಮಹಾರಾಷ್ಟ್ರ ದಿಂದ ಬಂದಿದ್ದಾರೆ. ಮುಂಬೈನಿಂದ ಆಗಮಿಸಿದವರಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ಕೊರೊನಾ ಸೊಂಕು ಬಂದಿದೆ ಎಂದು ತಿಳಿಸಿದ್ದಾರೆ. ಉಡುಪಿಯಲ್ಲಿ ಇಂದು 210 ಕೊರೊನಾ ಪಾಸಿಟಿವ್ ಕೇಸ್ ಬರುವ ಸಾಧ್ಯತೆ ಇದೆ ಎಂದು ತಿಳಿಸಿದರು.

Facebook Comments

comments