DAKSHINA KANNADA
ಬೆಂಗಳೂರಿನಲ್ಲಿ ಹೈಕೋರ್ಟ್ ಯಕ್ಷಗಾನಾಭಿಮಾನಿ ವಕೀಲರಿಂದ ಯಕ್ಷಗಾನ ಆಯೋಜನೆ
ಮಂಗಳೂರು : ಬೆಂಗಳೂರಿನ H.B.R. ಬಡಾವಣೆಯಲ್ಲಿರುವ ಬ್ಯಾರಿಸ್ ಸೌಹಾರ್ದ ಭವನದಲ್ಲಿ ಅಗೋಸ್ಟ್ 23ನೇ ಶುಕ್ರವಾರ ಸಂಜೆ ಹೈಕೋರ್ಟ್ ಯಕ್ಷಗಾನಾಭಿಮಾನಿ ವಕೀಲರು ಬೆಂಗಳೂರು ಬ್ಯಾರಿ ವೆಲ್ಫಾರ್ ಅಸೋಸಿಯೇಷನ್ ರವರ ಸಹಕಾರದೊಂದಿಗೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಧರ್ಮಸ್ಥಳ ಇವರಿಂದ “ಶ್ರೀಮತಿ ಪರಿಣಾಯ ಅಗ್ರ ಪೂಜೆ” ಎಂಬ ಯಕ್ಷಗಾನ ಪ್ರಸಂಗ ಆಯೋಜಿಸಿದ್ದರು.
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾಯಮೂರ್ತಿ ಪಿ.ಮೊಹಮ್ಮದ್ ನವಾಜ್,ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ, ನ್ಯಾಯಮೂರ್ತಿ ಕೆ.ರಾಜೇಶ್ ರೈ ,ಕರ್ನಾಟಕದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಮತ್ತು ಬ್ಯಾರಿ ಅಸೋಸಿಯೇಷನ್ ನ ಪ್ರವರ್ತಕರಾದ ಉಮರ್ ಟೀಕೆ , ಹೈಕೋರ್ಟಿನ ಹಿರಿಯ ನ್ಯಾಯವಾದಿ ಕೆ.ಎಸ್.ವ್ಯಾಸ ರಾವ್ ಉಪಸ್ಥಿತರಿದ್ದರು.
ಗಂಡು ಕಲೆಯಾದ ಯಕ್ಷಗಾನ ವನ್ನು ಉಳಿಸಿ ಬೆಳೆಸಲು ಸಹೋದರ ಸಮುದಾಯದೊಂದಿಗೆ ಬ್ಯಾರಿ ಸಮುದಾಯವು ಕೈ ಜೋಡಿಸಿದೆ,ಇಂತಹ ಕಲಾ ಕಾರ್ಯಕ್ರಮ ಗಳು ಅವಿಭಜಿತ ದ.ಕನ್ನಡ ಜಿಲ್ಲೆಯ ಮಣ್ಣಿನ ಮಕ್ಕಳಲ್ಲಿ ಶಾಂತಿ ಸೌಹಾರ್ದತೆ ಹೆಚ್ಚಿಸಲು ಪೂರಕವಾಗಿದೆ ಮತ್ತುಈ ಕಾರ್ಯಕ್ರಮ ವು ಸೌಹಾರ್ದ ಭವನದಲ್ಲಿ ಆಯೋಜಿಸಿದ್ದಕ್ಕೆ ವಂದನೆ ಸಲ್ಲಿಸಿ ಮುಂದಿನ ವರ್ಷವೂ ಅಯೋಜಿಸುವಂತೆ ಉಮರ್ ಟೀಕೆ ತಿಳಿಸಿದರು.
ಕಲಾಭಿಮಾನಿಗಳ ಮೆಚ್ಚುಗೆಯೊಂದಿಗೆ, ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮದ ರುವಾರಿಗಳಾದ ಕರ್ನಾಟಕ ಹೈಕೋರ್ಟಿನ ಹಿರಿಯ ನ್ಯಾಯವಾದಿ ಎಂ.ಸುಧಾಕರ ಪೈ ಸ್ವಾಗತಿಸಿ ವಂದಿಸಿದರು.