Connect with us

    KARNATAKA

    ಮಹಿಳೆಯರ ಶೌಚಾಲಯದಲ್ಲಿ ಗುಪ್ತ ವಿಡಿಯೋ ಚಿತ್ರೀಕರಣ ,ಶಿವಮೊಗ್ಗದ ಕಿರಾತಕ ಬಂಧನ 

    ಬೆಂಗಳೂರು :  ಮಹಿಳೆಯರ ಶೌಚಾಲಯದಲ್ಲಿ ಗುಪ್ತವಾಗಿ ಮೊಬೈಲ್ ಇಟ್ಟು  ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಕಿರಾತಕ ಯುವಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

    ಶಿವಮೊಗ್ಗ ಮೂಲದ ಮನೋಜ್ (23) ಬಂಧಿತ ಆರೋಪಿಯಾಗಿದ್ದಾನೆ. ಕಾಫಿ ಶಾಪ್​ನಲ್ಲಿ ಕಾಫಿ ಮೇಕರ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಮನೋಜ್, ಶನಿವಾರ ಬೆಳಗ್ಗೆ ಮಹಿಳೆಯರ ಶೌಚಾಲಯಕ್ಕೆ ಹೋಗಿದ್ದಾನೆ. ಅಲ್ಲಿ ಕಸದ ಬುಟ್ಟಿಗೆ ಹೋಲ್​ ಮಾಡಿದ್ದಾನೆ. ನಂತರ ಮೊಬೈಲ್​​ ಅನ್ನು ಫ್ಲೈಟ್​ ಮೂಡ್​​ಗೆ ಹಾಕಿ ವಿಡಿಯೋ ಚಿತ್ರಕರಣಕ್ಕೆ ಇರಿಸಿ, ಹೊರ ಬಂದು ಯಥಾಪ್ರಕಾರ ತನ್ನ ಕೆಲಸದಲ್ಲಿ ತೊಡಗಿಕೊಂಡಿದ್ದಾನೆ. ನಂತರ ಶೌಚಾಲಯಕ್ಕೆ ಹೋದ ಮಹಿಳೆಯೊಬ್ಬರು ಮೊಬೈಲ್​ ಇರುವುದನ್ನು ಗಮನಿಸಿದ್ದಾರೆ. ಅವರು ತಕ್ಷಣವೇ ಪೊಲೀಸರಿಗೆ ವಿಚಾರ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿದ ಸದಾಶಿವನಗರ ಪೊಲೀಸರು ಪರಿಶೀಲನೆ ನಡೆಸಿ, ಆರೋಪಿ ಕಿರಾತಕ ಮನೋಜನನ್ನು ಬಂಧಿಸಿ ಪ್ರಕರಣ ದಾಖಲು ಮಾಡಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply