KARNATAKA
ಇತ್ತ ಗಂಡ ಕೆಲಸಕ್ಕೆ ಅತ್ತ ಹೆಂಡತಿ ಪ್ರಿಯಕರನೊಂದಿಗೆ ಸರಸಕ್ಕೆ,ಪರಪುರುಷನೊಂದಿಗೆ ಪತ್ನಿ ಕಂಡು ಗಂಡ ದಂಗು, ಬಳಿಕ ನಡೆದದ್ದು ಘನಘೋರ..!
ಬೆಂಗಳೂರು: ಕೆಲಸಕ್ಕೆ ಹೋದ ಹೊತ್ತಲ್ಲಿ ಮನೆಯಲ್ಲೇ ಪರ ಪುರುಷನೊಂದಿಗೆ ಸರಸಕ್ಕಿಳಿದ ಹೆಂಡತಿಯನ್ನು ಕಂಡು ದಂಗಾದ ಗಂಡನನ್ನು ಹೆಂಡತಿ ಮತ್ತು ಪ್ರಿಯಕರ ಮುಗಿಸಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಹಾಸನ ಮೂಲದ ತೇಜಸ್ವಿನಿ ಮತ್ತು ಮಹೇಶ್ ಒಂದೇ ಊರಿನವರಾಗಿದ್ದು ಪ್ರೀತಿಸಿ ಮದುವೆಯಾಗಿದ್ದರು. ಸುಖ ಸಂಸಾರಕ್ಕೆ ಸಾಕ್ಷಿ ಎಂಬಂತೆ ಗಂಡು ಮತ್ತೊಂದು ಹೆಣ್ಣು ಮುದ್ದಾದ ಮಕ್ಕಳನ್ನು ಹೊಂದಿದ್ದರು. ಮಹೇಶ ಆಟೋ ಓಡಿಸಿಕೊಂಡು ಸಂಸಾರ ನಿಭಾಯಿಸಿಕೊಂಡು ಹೋಗ್ತಿದ್ದ. ಅತ್ತ ತೇಜಸ್ವಿನಿ ಕೂಡ ಖಾಸಗಿ ಫೈನಾನ್ಸ್ ಒಂದ್ರಲ್ಲಿ ಕೆಲಸ ಮಾಡ್ತಿದ್ದಳು.ಸಂಸಾರದಲ್ಲಿ ಎಲ್ಲವೂ ಚೆನ್ನಾಗಿತ್ತು ಅನ್ನೋವಾಗ್ಲೇ ಅದ್ಯಾಕೋ ಒಂದು ವರ್ಷದಿಂದ ತೇಜಸ್ವಿನಿ ಮಹೇಶ್ ಮಧ್ಯೆ ಕಲಹ ಶುರುವಾಗಿದೆ.
ಈ ಗಂಡ ಹೆಂಡತಿ ಜಗಳದ ಲಾಭ ಪಡೆಯಲು ತೇಜಸ್ವಿನಿ ಕೆಲಸ ಮಾಡುತ್ತಿದ್ದ ಫೈನಾನ್ಸ್ ನಲ್ಲಿ ನೌಕರಿ ಮಾಡಿಕೊಂಡಿದ್ದ ಆ ಗಜೇಂದ್ರ ಎಂಟ್ರಿಯಾಗಿದ್ದ. ಗಜೇಂದ್ರನ ಜೊತೆ ತೇಜಸ್ವಿನಿ ಸ್ನೇಹ ಬೆಳೆಸಿಕೊಂಡಿದ್ದಾಳೆ. ಆ ಸ್ನೇಹ ಮುಂದೆ ಸಲುಗೆ ಪಡೆದು ಹಾಸಿಗೆವರೆಗೂ ತಲುಪಿದೆ. ಈ ವಿಚಾರ ತೇಜಸ್ವಿನಿ ಪತಿ ಮಹೇಶ್ಗೂ ಗೊತ್ತಾಗಿದೆ. ಮಹೇಶ್ ಮಾತ್ರ ಸಿಟ್ಟಿನ ಬುದ್ಧಿಗೆ ಕೈ ಕೊಡದೇ ತಾಳ್ಮೆಯಿಂದ ಸಂಸಾರವನ್ನು ಸುಧಾರಿಸುವ ಕೆಲಸ ಮಾಡ್ತಿದ್ದ. ಮರ್ಯಾದೆ ಪ್ರಶ್ನೆ ಅಂತ ಮಹೇಶ್ ತನ್ನ ಪತ್ನಿಗೆ ಬುದ್ಧಿಮಾತು ಕೂಡ ಹೇಳಿದ್ದಾನೆ.ನಮಗೆ ಪುಟ್ಟ ಮಕ್ಕಳಿದ್ದಾರೆ ಆ ಗಜೇಂದ್ರನ ಸಹವಾಸ ಬಿಟ್ಟು ಸಂಸಾರ ಮಾಡ್ಕೊಂಡು ಹೋಗು ಅಂತ ತಿಳಿ ಹೇಳಿದ್ದರೂ ತೇಜಸ್ವಿನಿ ಮಾತ್ರ ತನ್ನ ಚಾಳಿ ಬಿಟ್ಟಿರಲಿಲ್ಲ.
ಆಗಸ್ಟ್ 9 ರಂದು ಮಹೇಶ್ ಕೆಲಸಕ್ಕೆ ಅಂತ ಮನೆಯಿಂದ ಆಚೆ ಹೋಗಿದ್ದಾನೆ. ಈ ವೇಳೆ ತೇಜಸ್ವಿನಿ ಪ್ರಿಯಕರ ಗಜೇಂದ್ರನನ್ನ ಮತ್ತೆ ಮನೆಗೆ ಕರೆಸಿ ಬೆಡ್ ರೂಮಲ್ಲಿ ಕಾಮದಾಟ ಶುರು ಹಚ್ಚಿಕೊಂಡಿದ್ದಾಳೆ. ಬೆಳಗ್ಗೆ ಕೆಲಸಕ್ಕೆ ಅಂತ ಹೋಗಿದ್ದ ಮಹೇಶ್ ಅದ್ಯಾಕೋ ಅವತ್ತು ಮಧ್ಯಾಹ್ನವೇ ಮನೆಗೆ ಬಂದಿದ್ದ. ಮನೆಗೆ ಬಂದ ಮಹೇಶ್ ಕಣ್ಣಿಗೆ ಕಂಡಿದ್ದು, ತೇಜಸ್ವಿನಿ ಮತ್ತು ಗಜೇಂದ್ರನ ಸರಸ ಸಲ್ಲಾಪ. ಇದನ್ನ ಕಣ್ಣಾರೆ ಕಂಡ ಮಹೇಶ್ ಕೋಪ ನೆತ್ತಿಗೇರಿ ಪತ್ನಿ ತೇಜಸ್ವಿನಿ ಮೇಲೆ ಹಲ್ಲೆ ಮಾಡಿದ್ದಾನೆ.
ಈ ವೇಳೆ ಬಿಡಿಸಲು ಬಂದ ಗಜೇಂದ್ರನಿಗೂ ಥಳಿಸಿದ್ದಾನೆ. ಅದಾಗಲೇ ಮಹೇಶ್ ತಮ್ಮನ್ನ ಉಳಿಸಲ್ಲ ಅಂತ ಅಂದುಕೊಂಡ ತೇಜಸ್ವಿನಿ ಮತ್ತು ಗಜೇಂದ್ರ ಮಹೇಶ್ ಜೀವ ತೆಗೆಯೋ ನಿರ್ಧಾರ ಮಾಡಿಬಿಟ್ಟಿದ್ದರು. ಇಬ್ಬರು ಸೇರಿ ಮಹೇಶನ ಕುತ್ತಿಗೆ ಹಿಸುಕಿ ಉಸಿರು ನಿಲ್ಲಿಸಿಯೇಬಿಟ್ಟಿದ್ರು. ಬಳಿಕ ಗಂಡ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾನೆ ಅಂತ ಹೈಡ್ರಾಮಾ ಮಾಡಿಬಿಟ್ಟಿದ್ದಳು. ಆದ್ರೆ ಮೊದಲೇ ಅನುಮಾನ ಪಟ್ಟ ಪೊಲೀಸರು ತೇಜಸ್ವಿನಿಯನ್ನ ತೀವ್ರ ವಿಚಾರಣೆ ನಡೆಸಿದಾಗ ಸತ್ಯ ಆಚೆ ಬಂದಿತ್ತು. ಪರ ಪುರುಷನಿಗಾಗಿ ಪತ್ನಿ ಪತಿಯನ್ನೆ ಕೊಲೆ ಮಾಡಿದ್ದಾಳೆ. ಗಂಡನ ಜೀವ ತೆಗೆದ ತೇಜಸ್ವಿನಿ ಮತ್ತು ಮಹೇಶ್ ಇಬ್ಬರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪರಸಂಗ ಮಾಡಿದ ತಪ್ಪಿಗೆ ಏನು ಅರಿಯದ ಆ ಪುಟ್ಟ ಕಂದಮ್ಮಗಳು ಅನಾಥವಾಗಿದ್ದಾರೆ.
ಇದನ್ನು ಓದಿ..
ಉಳ್ಳಾಲ:ಟಾರ್ಗೆಟ್ ಇಲ್ಯಾಸ್ ಹತ್ಯೆಗೆ ಪ್ರತಿಕಾರ, ಆರೋಪಿ ಸಮೀರ್ ಬರ್ಬರ ಹತ್ಯೆ..!
You must be logged in to post a comment Login