KARNATAKA
ಹೇ.. ಇದು ಬೆಂಗಳೂರು ಅಲ್ಲ – ಮಂಡ್ಯ ಕಾರ್ಯಕರ್ತನಿಂದ ನಲಪಾಡ್‌ಗೆ ತರಾಟೆ
ಮಂಡ್ಯ, ಅಕ್ಟೋಬರ್ 03: ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್‌ಗೆ ಕೈ ಕಾರ್ಯಕರ್ತರೊಬ್ಬರು ತರಾಟೆಗೆ ತೆಗೆದುಕೊಂಡ ಪ್ರಸಂಗ ಇಂದು ನಡೆದಿದೆ.
ಮೈಸೂರಿನಿಂದ ಹೊರಟ ಭಾರತ್ ಜೋಡೋ ಯಾತ್ರೆ ಇಂದು ಮಧ್ಯಾಹ್ನ ಪಾಂಡವಪುರಕ್ಕೆ ಎಂಟ್ರಿಯಾಯಿತು. ನಿಯಂತ್ರಣ ಮಾಡುವ ವಿಚಾರಕ್ಕೆ ಜನರ ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆಯುತ್ತಿತ್ತು.
ಈ ವೇಳೆ ಓಡಿ ಬಂದ ನಲಪಾಡ್, ಕೈ ಮುಗಿದು ಜನರನ್ನು ನಿಯಂತ್ರಣ ಮಾಡಲು ಮುಂದಾದರು. ಈ ಸಂದರ್ಭದಲ್ಲಿ ನಲಪಾಡ್ ಅವರನ್ನು ಮಂಡ್ಯದ ಕೈ ಕಾರ್ಯಕರ್ತರೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ.
ಹೇ..ಇದು ಬೆಂಗಳೂರು ಅಲ್ಲಾ ಎಂದು ಕೈ ಕಾರ್ಯಕರ್ತರೊಬ್ಬರು ಅವಾಜ್ ಹಾಕಿದ್ದಾರೆ. ಅವಾಜ್ ಹಾಕಿದ ಬೆನ್ನಲ್ಲೇ ನಲಪಾಡ್ ಕೈ ಮುಗಿದು ವಾಪಸ್ ಹೋಗಿದ್ದಾರೆ.
You must be logged in to post a comment Login