ಹೆಬ್ಶಿಬಾ ರಾಣಿಗೆ ಉಡುಪಿ ನೂತನ ಜಿಲ್ಲಾಧಿಕಾರಿಯಾಗಿ ವರ್ಗಾವಣೆ

ಉಡುಪಿ, ಫೆಬ್ರವರಿ 04: ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಐಎಎಸ್‌ ಅಧಿಕಾರಿಯಾಗಿರುವ ಹೆಬ್ಶಿಬಾ ರಾಣಿ ಕೊರಲ್ ಪತಿ ನಿಯುಕ್ತಿಗೊಂಡಿದ್ದಾರೆ.

ಈ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.1980 ರಲ್ಲಿ ಜನಿಸಿದ ಹೆಬ್ಶಿಬಾ ಅವರು ಮೂಲತ ಆಂಧ್ರ ಪ್ರದೇಶದವರು. 2011 ನೇ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಹೆಬ್ಶಿಬಾ ಅವರು ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮಹಾ ನಗರ ಪಾಲಿಕೆಯ ಆಯುಕ್ತೆಯಾಗಿ ಕರ್ತವ್ಯ ನಿರ್ವಹಿಸಿದ್ದರು. ನೇರಾ ನಡೆನುಡಿ ಮತ್ತು ನಿಷ್ಟವಂತ ಅಧಿಕಾರಿಯಾಗಿರುವ ಹೆಬ್ಶಿಬಾ ಅವರನ್ನು ಅಲ್ಲಿ ಕರ್ತವ್ಯ ನಿರ್ವಹಿಸಲು ಅಂದಿನ ಕಾಂಗ್ರೆಸ್ ಸರ್ಕಾರ ಮತ್ತು ಪಾಲಿಕೆಯ ಸದಸ್ಯರುಗಳು, ಶಾಕರುಗಳು ಬಿಡದೆ ಸತಾಯಿಸಿ, ಕೊನೆಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿ ಅವರನ್ನು ವರ್ಗಾವಣೆ ಮಾಡಲುವಲ್ಲಿ ಯಶಸ್ವಿಯಾಗಿದ್ದರು.  ಆದರೆ ಅಲ್ಲಿಂದ ವಿಜಯಪುರ ಜಿಲ್ಲಾಧಿಕಾರಿಯಾಗಿ ನಿಯುಕ್ತಿ ಗೊಂಡಿದ್ದರು. ನಂತರ ಹುಬ್ಬಳ್ಳಿ- ಧಾರಾವಾಡ ಮಹಾನಗರ ಪಾಲಿಕೆಯ ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಕೂಡ ಕರ್ತವ್ಯ ನಿರ್ವಹಿಸಿದ್ದಾರೆ. 

ಇದುವರೆಗೆ ಉಡುಪಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರನ್ನು ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿಯನ್ನಾಗಿ ವರ್ಗಾವಣೆಗೊಳಿಸಲಾಗಿದೆ. ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಆಗಿ 2015 ನವಂಬರ್ 10 ರಂದು ಅಧಿಕಾರ ಸ್ವೀಕರಿಸಿದ್ದರು. 2017.ಫೆ.23 ರಂದು ಉಡುಪಿ ಜಿಲ್ಲಾಧಿಕಾರಿಯಾಗಿ ಪದೋನ್ನತಿ ಹೊಂದಿದ್ದರು. ಡಿಸಿ ಆದ ಮೇಲೆ ಜಿಲ್ಲೆಯಲ್ಲಿ ಸ್ವಚ್ಛತೆ ಯೋಜನೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಿದ್ದರು. ಅಕ್ರಮ ಮರಳುಗಾರಿಕೆ ಬಗ್ಗೆ ಕಠಿಣ ನಿಲುವು ಹೊಂದಿದ್ದ ಅವರ ಮೇಲೆ 2 ವರ್ಷಗಳ ಹಿಂದೆ ದಾಳಿ ಕೂಡ ನಡೆದಿತ್ತು.

10 Shares

Facebook Comments

comments