BELTHANGADI
ಕ್ಯಾನ್ಸರ್ ನಿಂದ ಮಗನನ್ನು ಬದುಕಿಸಲು ಈ ಅಸಹಾಯಕ ತಾಯಿಗೆ ನೆರವಾಗಿ

ಕ್ಯಾನ್ಸರ್ ನಿಂದ ಮಗನನ್ನು ಬದುಕಿಸಲು ಈ ಅಸಹಾಯಕ ತಾಯಿಗೆ ನೆರವಾಗಿ
ಮಂಗಳೂರು ಮಾರ್ಚ್ 22: ಆತ ನೂರಾರು ಕನಸುಗಳನ್ನು ಹೊಂದಿದ್ದ ಯುವಕ. ಗಂಡು ದಿಕ್ಕಿಲ್ಲದ ಮನೆಗೆ ತಾಯಿಗೆ ಒಬ್ಬನೇ ಮಗನಾಗಿ ಬೆಳೆದ. ಕಷ್ಟಪಟ್ಟು ವಿಧ್ಯಾಭ್ಯಾಸ ಮಾಡಿ ಕಾಲೇಜಿಗೆ ನಂಬರ್ ಒನ್ ಕೂಡಾ ಆದ. ಆದ್ರೆ ವಿಧಿ ಆತನ ಬಾಳಲ್ಲಿ ಕ್ರೂರ ಆಟ ಆಡಿದೆ.ಶ್ವಾಸಕೋಶದ ಕ್ಯಾನ್ಸರ್ ಆತನ ಕನಸುಗಳನ್ನು ಕಿತ್ತು ತಿನ್ನುತ್ತಿದೆ.
ಒಮ್ಮೆ ದೇವರೂ ಕ್ರೂರಿಯಾಗಿ ಕಾಣುತ್ತಾನೆ ಅಂತಾರಲ್ಲ..ಬಹುಷ ಈ ಯುವಕನ ಸ್ಥಿತಿ ನೋಡಿ ನಿಮಗೂ ಹಾಗೇಯೇ ಅನಿಸಬಹುದು. ಗಂಡು ದಿಕ್ಕಿಲ್ಲದ ಕುಟುಂಬಕ್ಕೆ ಆಧಾರಸ್ತಂಭವಾಗಿ ತಾಯಿಗೆ ನೆಮ್ಮದಿಯ ಜೀವನ ಕೊಡುವ ಮಗನಾಗಿ ಬದುಕಿ ಬಾಳಬೇಕಾಗಿದ್ದ ಈ ಯುವಕನ ಹೆಸರು ಪದ್ಮಪ್ರಸಾದ್.

ಬೆಳ್ತಂಗಡಿ ತಾಲೂಕಿನ ವೇಣೂರಿನ ಗುಂಡೂರಿ ನಿವಾಸಿ ಪದ್ಮಪ್ರಸಾದ್ ಬಾಳಲ್ಲಿ ವಿಧಿ ತನ್ನ ಕ್ರೂರ ಲೀಲೆಯನ್ನು ತೋರಿಸಿದೆ.. ಬೀಡಿಕಟ್ಟಿ ಮಗನನ್ನು ಕಷ್ಟಪಟ್ಟು ಓದಿಸಿದ ತಾಯಿಯ ಕಣ್ಣಿನಲ್ಲಿ ಬರೀ ಕಣ್ಣೀರಲ್ಲದೆ ಏನೂ ಕಾಣುತ್ತಿಲ್ಲ.ತಾಯಿಯ ಶ್ರಮಕ್ಕೆ ಸರಿಯಾಗಿ ಕಾಲೇಜಿಗೆ ಟಾಪ್ ಆಗಿಹೊರಹೊಮ್ಮಿದ ಪದ್ಮಪ್ರಸಾದ್ ನ ಬಾಳಲ್ಲಿ ಈಗ ಕ್ಯಾನ್ಸರ್ ಎಂಬ ಮಹಾಮಾರಿ ಅಂಟಿ ಕೊಂಡಿದೆ.
ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿರುವ ಪದ್ಮಪ್ರಸಾದ್ ಬಾಳಲ್ಲಿ ಆಸೆಗಳು ಕಮರಿ ಹೋಗಿದೆ..ಕನಸುಗಳು ನುಚ್ಚು ನೂರಾಗಿದೆ..ಪ್ರಸ್ತುತ ಮದ್ದಿಗೂ ಹಣ ಇಲ್ಲದೆ ಪದ್ಮಪ್ರಸಾದ್ ಪರದಾಡುವಂತಾಗಿದೆ.
ಸದ್ಯ ಮಂಗಳೂರಿನ ಕರಂಗಲ್ಪಾಡಿಯಲ್ಲಿರುವ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಪದ್ಮಪ್ರಸಾದ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಗನನ್ನು ಉಳಿಸಲು ತಾಯಿ ಸಾಲದ ಮೇಲೆ ಸಾಲಮಾಡಿ ಆಸ್ಪತ್ರೆಗೆ ಹಣ ತುಂಬುತ್ತಿದ್ದಾರೆ. ಆದರೆ ಮತ್ತಷ್ಟು ಹಣದ ಅವಶ್ಯಕತೆ ಇರೋದರಿಂದ ಮುಗ್ಥ ತಾಯಿ ಕಂಗಾಲಾಗಿದ್ದಾರೆ.4 ಲಕ್ಷಕ್ಕೂ ಅಧಿಕ ಹಣದ ಅವಶ್ಯಕತೆ ಯಿದ್ದು ದಾನಿಗಳ ಮೊರೆ ಹೋಗಿದ್ದಾರೆ.
ತಾಯಿಗೆ ಮಗನನ್ನು ಉಳಿಸಲು, ಮಗನಿಗೆ ಕನಸನ್ನು ಉಳಿಸಲು ದಾನಿಗಳ ಶಕ್ತಿಯಾನುಸಾರ ನೆರವು ನೀಡಬೇಕಿದೆ.ವಿಧಿಯ ಕ್ರೂರ ಹೊಡೆತಕ್ಕೆ ಒಳಗಾದ ತಾಯಿ-ಮಗನಿಗೆ ನೆರವು ಮಾಡಬೇಕಾದರೆ ಬ್ಯಾಂಕ್ ಅಕೌಂಟ್ ನಂಬರ್
ಪದ್ಮಪ್ರಸಾದ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ವೇಣೂರು ಬ್ರಾಂಚ್
Ac Nom_54060717572
IFSC Code_SBIN0040908
ದೂರವಾಣಿ ಸಂಖ್ಯೆ_ 9686426918