ಮರಕ್ಕೆ ಡಿಕ್ಕಿ ಹೊಡೆದ ಕಾರು – ಯುವ ತುಳು ಚಿತ್ರ ನಿರ್ದೇಶಕ ಸಾವು

ಮಂಗಳೂರು ಮಾರ್ಚ್ 22: ಮೂಡಬಿದ್ರೆ ಸಮೀಪ ಓಮ್ನಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವ ತುಳು ಚಿತ್ರ ನಿರ್ದೇಶಕ ಮೃತಪಟ್ಟಿರುವ ಘಟನೆ ನಡೆದಿದೆ.

ಹ್ಯಾರಿಸ್ ಹೌದಾಲ್(30) ಮೃತಪಟ್ಟ ಯುವ ಚಿತ್ರ ನಿರ್ದೇಶಕ. ಮೃತ ಹ್ಯಾರಿಸ್ ಹೌದಾಲ್ ಕಾರಿನಲ್ಲಿ ಮೂಡುಬಿದ್ರೆಯಿಂದ ಶಿರ್ತಾಡಿ ಕಡೆಗೆ ಬೆಳಗ್ಗಿನ ಜಾವ ಹೋಗುತ್ತಿದ್ದರು. ಈ ವೇಳೆ ಮೂಡುಬಿದ್ರೆಯ ಶಿರ್ತಾಡಿ ಬಳಿ ನಿದ್ದೆ ಮಂಪರಿನಲ್ಲಿ ವೇಗವಾಗಿ ಮರಕ್ಕೆ ಡಿಕ್ಕಿ ಹೊಡೆದಿದ್ದಾರೆ ಎಂದು ಹೇಳಲಾಗಿದ್ದು, ಪರಿಣಾಮ ನಿರ್ದೇಶಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಹ್ಯಾರಿಸ್ ನಿರ್ದೇಶನದ ಆಟಿಡೊಂಜಿ ದಿನ ತುಳು ಸಿನೆಮಾದ ಶೂಟಿಂಗ್ ನಡೆಯುತ್ತಿತ್ತು. ಕಳೆದ ಮೂರು ದಿನಗಳಿಂದ ಸರಿಯಾಗಿ ನಿದ್ದೆ ಇಲ್ಲದ ಹಿನ್ನಲೆಯಲ್ಲಿ ಬೆಳಿಗ್ಗೆ ಕಾರು ಚಲಾಯಿಸಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಈ ಕುರಿತು ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

5 Shares

Facebook Comments

comments