Connect with us

    LATEST NEWS

    ಛತ್ತೀಸ್‍ಗಢ – ಹೆಲಿಕಾಪ್ಟರ್ ಪತನ ಇಬ್ಬರು ಪೈಲೆಟ್ ಸಾವು

    ಛತ್ತೀಸ್‍ಗಢ : ಹಾರಾಟದ ಅಭ್ಯಾಸದ ವೇಳೆ ಹೆಲಿಕಾಪ್ಟರ್ ಪತನಗೊಂಡು ಇಬ್ಬರು ಪೈಲೆಟ್ ಸಾವನ್ನಪ್ಪಿದ ಘಟನೆ ಛತ್ತೀಸ್‍ಗಢದ ರಾಯ್ಪುರ್‌ದ ವಿಮಾನ ನಿಲ್ದಾಣದಲ್ಲಿ ನಡೆದಿದೆ.


    ಮೃತರನ್ನು ಕ್ಯಾಪ್ಟನ್ ಗೋಪಾಲ್ ಕೃಷ್ಣ ಪಾಂಡಾ ಮತ್ತು ಕ್ಯಾಪ್ಟನ್ ಎಪಿ ಶ್ರೀವಾಸ್ತವ ಎಂದು ಗುರುತಿಸಲಾಗಿದೆ. ಪೈಲಟ್‍ಗಳು ಹೆಲಿಕಾಪ್ಟರ್ ಇಳಿಸಲು ಯತ್ನಿಸಿದ ಸಂದರ್ಭದಲ್ಲಿ ಹೆಲಿಕಾಪ್ಟರ್‌ಗೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದಾಗಿ ಹೆಲಿಕಾಪ್ಟರ್‌ನಲ್ಲಿದ್ದ ಇಬ್ಬರೂ ಪೈಲಟ್‍ಗಳು ಸಾವನ್ನಪ್ಪಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಕರಿರಲಿಲ್ಲ.

    ಅಪಘಾತಕ್ಕೆ ತಕ್ಷಣವೇ ಕಾರಃಣ ಏನು ಎಂದು ತಿಳಿದು ಬಂದಿರಲಿಲ್ಲವಾಗಿತ್ತು. ನಿಖರವಾದ ಕಾರಣವನ್ನು ಖಚಿತ ಪಡಿಸಿಕೊಳ್ಳಲು ಡೈರಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ಮತ್ತು ಛತ್ತೀಸ್‍ಗಢ ಸರ್ಕಾರವು ತಾಂತ್ರಿಕ ತನಿಖೆಯನ್ನು ಕೈಗೊಂಡಿದೆ

    Share Information
    Advertisement
    Click to comment

    You must be logged in to post a comment Login

    Leave a Reply