Connect with us

    LATEST NEWS

    ಫಾಸ್ಟ್ ಟ್ಯಾಗ್ ನೆಪದಲ್ಲಿ ವಾಹನ ಚಾಲಕರ ವಿರುದ್ದ ರೌಡಿಸಂ ಗೆ ಇಳಿದ ಹೆಜಮಾಡಿ ಟೋಲ್ ಗೇಟ್ ಸಿಬ್ಬಂದಿ

    ಫಾಸ್ಟ್ ಟ್ಯಾಗ್ ನೆಪದಲ್ಲಿ ವಾಹನ ಚಾಲಕರ ವಿರುದ್ದ ರೌಡಿಸಂ ಗೆ ಇಳಿದ ಹೆಜಮಾಡಿ ಟೋಲ್ ಗೇಟ್ ಸಿಬ್ಬಂದಿ

    ಮಂಗಳೂರು ಡಿಸೆಂಬರ್ 15: ಫಾಸ್ಟ್ ಟ್ಯಾಗ್ ಕುರಿತಂತೆ ಕೇಂದ್ರ ಸರಕಾರದ ಆದೇಶವಿದ್ದರೂ ಮಂಗಳೂರು – ಉಡುಪಿ ಗಡಿ ಭಾಗದಲ್ಲಿರುವ ಹೆಜಮಾಡಿ ಟೋಲ್ ಗೇಟ್ ನಲ್ಲಿ ಸಿಬಂದಿಗಳು ವಾಹನ ಸವಾರರ ಮೇಲೆ ರೌಡಿಸಂ ನಡೆಸುತ್ತಿರುವ ಘಟನೆ ವರದಿಯಾಗಿದೆ.
    ಸಾಮಾಜಿಕ ಕಾರ್ಯಕರ್ತರಾದ ಅದ್ದಿ ಬೊಳ್ಳೂರು ಹೆಜಮಾಡಿ ಟೋಲ್ ಗೇಟ್ ಬಳಿ ಇರುವ ಪಾಸ್ಟ್ಯಾಗ್ ವಿತರಣೆ ಕೇಂದ್ರದಲ್ಲಿ ಕಳೆದ ಹತ್ತು ದಿನಗಳ ಹಿಂದೆ ತನ್ನ ಎರಡು ವಾಹನಗಳಿಗೆ ಫಾಸ್ಟ್ ಟ್ಯಾಗ್ ಖರೀದಿಸಿದ್ದಾರೆ.

    ಆದರೆ ಇಂದು ಬೆಳಿಗ್ಗೆ ಅದ್ದಿ ಬೊಳ್ಳೂರು ಅವರು ಫಾಸ್ಟ್ ಟ್ಯಾಗ್ ಇರುವ ವಾಹನದೊಂದಿಗೆ ಪಡುಬಿದ್ರೆ ಕಡೆ ಪ್ರಯಾಣ ಬೆಳೆಸಿದ್ದಾರೆ. ಈ ಸಂದರ್ಭ ಹೆಜಮಾಡಿ ಟೋಲ್ ಕೇಂದ್ರದಲ್ಲಿ ವಾಹನದಲ್ಲಿ ಅವಳಡಿಸಿದ್ದ ಫಾಸ್ಟ್ಯಾಗ್ ಸ್ಕ್ಯಾನ್ ಆಗ್ತಾ ಇಲ್ಲ ಎಂದು ಟೋಲ್ ಸಿಬ್ಬಂದಿಗಳು ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಅದ್ದಿ ಬೊಳ್ಳೂರು ಅವರು ನನ್ನ ವಾಹನದಲ್ಲಿ ಕಳೆದ ಹತ್ತು ದಿನಗಳ ಹಿಂದೆ ಫಾಸ್ಟ್ಯಾಗ್ ಅವಳಡಿಕೆ ಆಗಿದೆ ಅಲ್ಲದೆ ಖಾತೆಯಲ್ಲಿ ಕೂಡ ಸಾಕಷ್ಟು ಮೊತ್ತದ ಹಣವಿದೆ, ಇನ್ನು ಸ್ಕ್ಯಾನ್ ಆಗದಿದ್ದಲ್ಲಿ ಅದು ನನ್ನ ಸಮಸ್ಯೆ ಅಲ್ಲ ಎಂದು ಸಾಮಾಜಿಕ ಕಾರ್ಯಕರ್ತರಾದ ಅದ್ದಿ ಬೊಳ್ಳೂರು ಅವರು ಹೆಜಮಾಡಿ ಟೋಲ್ ಗೇಟ್ ಸಿಬ್ಬಂದಿಗೆ ತಿಳಿಸಿದ್ದಾರೆ.

    ಆದರೆ ಅಲ್ಲಿನ ಸಿಬ್ಬಂದಿಗಳು, ನೀವು ಹಣ ಪಾವತಿಸಲೇ ಬೇಕು ಎಂದು ಪಟ್ಟು ಹಿಡಿದಾಗ ಎಂದಿನಂತೆ ಇದ್ದ ದರ ದ್ವಿಮುಖ ಸಂಚಾರ ಶುಲ್ಕ ರೂ 55, ಕೊಡಲು ಮುಂದಾದಾಗ, ಇವತ್ತಿನಿಂದ ದ್ವಿಮುಖ ಸಂಚಾರದ ಟಿಕೆಟ್ ಕೋಡೋದಿಲ್ಲ ನೀವು ಏಕಮುಖ ಸಂಚಾರದ ಹಣ ಪಾವತಿಸಬೇಕು ಅದೂ ಕೂಡಾ ದುಪ್ಪಟ್ಟು, 35,ರೂ ಇದ್ದದ್ದು 70,ರೂ ಪಾವತಿಸಬೇಕು ಎಂದು ಬಲವಂತ ಮಾಡಿದ್ದಾರೆ. ಫಾಸ್ಟ್ ಟ್ಯಾಗ್ ಸರಿಯಾಗಿ ಕೆಲಸ ಮಾಡದಿದ್ದರೂ ಕೂಡ ವಾಹನ ಸವಾರರೇ ದಂಡ ವಿಧಿಸಬೇಕಾದ ಹೊಸ ಕಾನೂನು ಈಗ ಹೆಜಮಾಡಿ ಟೋಲ್ ಗೇಟ್ ನಲ್ಲಿ ಆರಂಭವಾಗಿದೆ.

    ಪೊಲೀಸರು ಇದ್ದರೂ ಕೂಡ ವಾಹನ ಸವಾರರ ಜೊತೆ ದರ್ಪದಿಂದ ಮಾತನಾಡಿದ್ದಲ್ಲದೇ, ಕೇಂದ್ರ ಸರಕಾರದ ಆದೇಶಗಳು ನಮಗೆ ಅನ್ವಯವಾಗುವುದಿಲ್ಲ ಎಂದು ತಿಳಿಸುವ ಮಟ್ಟಿಗೆ ದರ್ಪ ಮರೆದಿದ್ದಾರೆ.

    ಈಗಾಗಲೇ ಟೋಲ್ ಗೇಟ್ ಗಳಲ್ಲಿ ಫಾಸ್ಟ್ ಟ್ಯಾಗ್ ಆಳವಡಿಕೆಯ ಕುರಿತಂತೆ ಗೊಂದಲದಿಂದಾಗಿ ಸಣ್ಣ ಪುಟ್ಟ ಗಲಾಟೆಗಳು ಪ್ರಾರಂಭವಾಗಿದೆ. ಟೋಲ್ ಗೇಟ್ ಸಿಬ್ಬಂದಿಗಳೂ ವಾಹನ ಸವಾರರ ಜೊತೆ ಸಂಯಮದಿಂದ ವರ್ತಿಸದೇ ಸೀದಾ ಗಲಾಟೆಗೆ ತೆರಳುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವ ಸಾದ್ಯತೆ ಇದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಈ ಕುರಿತಂತೆ ಕ್ರಮಕೈಗೊಳ್ಳಬೇಕಾದ ಅಗತ್ಯತೆ ಇದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *