Connect with us

LATEST NEWS

ಮುಲ್ಕಿ : ಕ್ಷುಲ್ಲಕ ಕಾರಣಕ್ಕೆ ವೃದ್ದೆಯ ಕೊಲೆ ಮಾಡಿದ ಆರೋಪಿ ಆರೆಸ್ಟ್

ಕ್ಷುಲ್ಲಕ ಕಾರಣಕ್ಕೆ ವೃದ್ದೆಯ ಕೊಲೆ ಮಾಡಿದ ಆರೋಪಿ ಆರೆಸ್ಟ್

ಮಂಗಳೂರು ಡಿಸೆಂಬರ್ 16: ಮುಲ್ಕಿ ಶೀಮಂತೂರಿನಲ್ಲಿ ವೃದ್ದೆ ಮಹಿಳೆಯ ಬರ್ಬರ ಕೊಲೆ ನಡೆದ 8 ಗಂಟೆಗಳಲ್ಲೇ ಆರೋಪಿಯ ಬಂಧಿಸುವಲ್ಲಿ ಮುಲ್ಕಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನನ್ನು ತುಕರಾಮ ಶೆಟ್ಟಿ ಅಲಿಯಾಸ್​ ಬೊಗ್ಗು ಎಂದು ಗುರುತಿಸಲಾಗಿದೆ. ಶ್ರೀಮಂತೂರಿನ ಶಾರದಾ (75) ಕೊಲೆಯಾದ ದುರ್ದೈವಿ.

ಆರೋಪಿ ತುಕರಾಮ ಶೆಟ್ಟಿ ಶಾರಾದಾ ಅವರ ಮನೆಯಲ್ಲಿ ಇತ್ತೀಚೆಗೆ ಕೆಲಸ ಮಾಡಿದ್ದನು. ಹಣದ ವಿಚಾರದಲ್ಲಿ ಇಬ್ಬರ ನಡುವೆ ಮನಸ್ತಾಪ ಇತ್ತು ಎಂದು ಹೇಳಲಾಗಿದ್ದು, ಇದರಿಂದ ಕೋಪಗೊಂಡಿದ್ದ ತುಕರಾಮ ಶನಿವಾರ ರಾತ್ರಿ ಕಬ್ಬಿಣದ ಸರಳಿನಿಂದ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.ಕೊಲೆಗೈದು ನಂತರ ಆಕೆಯ ಶವವನ್ನು ಮನೆ ಪಕ್ಕದ ಬಾವಿಗೆ ಎಸೆಯಲು ಆರೋಪಿ ತುಕರಾಮ ಶೆಟ್ಟಿ ವಿಫಲ ಯತ್ನ ನಡೆಸಿದ್ದ ಎನ್ನಲಾಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಮುಲ್ಕಿ ಪೊಲೀಸರು, ಘಟನೆ ನಡೆದ ಎಂಟು ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ ಕಾರ್ಯವನ್ನು ನಗರ ಪೊಲೀಸ್ ಆಯುಕ್ತರಾದ ಡಾ, ಹರ್ಷ ಅವರು ಶ್ಲಾಘಿಸಿದ್ದಾರೆ.