Connect with us

    LATEST NEWS

    ಗಗನಕ್ಕೆ ಮುಖ ಮಾಡಿದ್ದ ಈರುಳ್ಳಿ ಬೆಲೆ ಈಗ ಇಳಿಕೆಯತ್ತ…!

    ಗಗನಕ್ಕೆ ಮುಖ ಮಾಡಿದ್ದ ಈರುಳ್ಳಿ ಬೆಲೆ ಈಗ ಇಳಿಕೆಯತ್ತ…!

    ಮಂಗಳೂರು ಡಿಸೆಂಬರ್ 15: ಕರಾವಳಿಯಲ್ಲಿ ಒಂದು ಕೆ.ಜಿ 200 ರೂಪಾಯಿವರೆಗೆ ಏರಿದ್ದ ಈರುಳ್ಳಿ ಬೆಲೆ ಈಗ ಇಳಿಕೆಯಾಗಿದ್ದು, ಗ್ರಾಹಕರು ನಿಟ್ಟುಸಿರುವ ಬಿಡುವಂತಾಗಿದೆ. ಮಂಗಳೂರು ಮಾರುಕಟ್ಟೆಯಲ್ಲಿ ಈರುಳ್ಳಿ ಕೆಜಿಗೆ 70 ರಿಂದ 80 ರೂಪಾಯಿಗೆ ತಲುಪಿದೆ.

    ಕಳೆದು ಒಂದು ತಿಂಗಳಿನಿಂದ ಗಗನಕ್ಕೇರಿದ್ದ ಈರುಳ್ಳಿ ಬೆಲೆಯಿಂದಾಗಿ ಜನರು ಈರುಳ್ಳಿ ಬಳಸಲು ಹಿಂದೆ ಮುಂದೆ ನೋಡುವಂತಾಗಿತ್ತು. ಹೋಟೇಲ್ ಗಳಲ್ಲಂತೂ ಈರುಳ್ಳಿ ಬಳಕೆಯ ತಿಂಡಿಗಳನ್ನು ನಿಲ್ಲಿಸಿ ಬಿಟ್ಟಿದ್ದರು. ಈರುಳ್ಳಿ ಬದಲಿಗೆ ಎಲೆಕೋಸನ್ನು ಬಳಸಲು ಆರಂಭಿಸಿದ್ದರು.
    ಈರುಳ್ಳಿ ಬೆಲೆ ಏರಿಕೆಯಾಗುತ್ತಿದ್ದಂತೆ ವಿದೇಶಗಳಿಂದಲೂ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಗಿತ್ತು. ಟರ್ಕಿ, ಈಜಿಪ್ಟ್ ಗಳಿಂದಲೂ ಮಂಗಳೂರು ಮಾರುಕಟ್ಟೆ ಈರುಳ್ಳಿ ಆಗಮಿಸಿತ್ತು. ಆದರೂ ಈರುಳ್ಳಿ ಬೆಲೆ ಮಾತ್ರ ಇಳಿಕೆಯಾಗಿರಲಿಲ್ಲ.

    ಈಗ ಮಾರುಕಟ್ಟೆಗೆ ದೇಶಿಯ ಈರುಳ್ಳಿ ಆಗಮನ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಬೆಲೆ ಕಡಿಮೆಯಾಗ ತೊಡಗಿದೆ. ಕೇಂದ್ರ ಮಾರುಕಟ್ಟೆಯ ವ್ಯಾಪಾರಿಗಳ ಪ್ರಕಾರ ಇನ್ನೂ ಬೆಲೆ ಇಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮಂಗಳೂರಿಗೆ ಈಗ ಮಹಾರಾಷ್ಟ್ರದಿಂದ ಈರುಳ್ಳಿ ಬರುತ್ತಿದೆ. ಹೊಸ ಈರುಳ್ಳಿ ಆಮದಿನೊಂದಿಗೆ ದರ ಇಳಿಕೆಯಾಗುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply