Connect with us

    LATEST NEWS

    ನೂತನ ಅಸ್ಥಿತ್ವಕ್ಕೆ ಬಂದಿರುವ ತಾಲೂಕುಗಳಲ್ಲಿ ಶೀಘ್ರದಲ್ಲಿ ಮಿನಿ ವಿಧಾನ ಸೌಧ ನಿರ್ಮಾಣ

    ನೂತನ ಅಸ್ಥಿತ್ವಕ್ಕೆ ಬಂದಿರುವ ತಾಲೂಕುಗಳಲ್ಲಿ ಶೀಘ್ರದಲ್ಲಿ ಮಿನಿ ವಿಧಾನ ಸೌಧ ನಿರ್ಮಾಣ

    ಉಡುಪಿ, ಫೆಬ್ರವರಿ 17 : ಉಡುಪಿ ಜಿಲ್ಲೆಯಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ತಾಲೂಕುಗಳಲ್ಲಿ 5 ಕೋಟಿ ರೂ ಗಳ ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಿಸಲಾಗುವುದು ಎಂದು ರಾಜ್ಯದ ಕಂದಾಯ ಸಚಿವ ಕಾಗೂಡು ತಿಮ್ಮಪ್ಪ ಹೇಳಿದ್ದಾರೆ. ಅವರು ಶನಿವಾರ ಹೆಬ್ರಿಯಲ್ಲಿ, ಹೆಬ್ರಿ ನೂತನ ತಾಲೂಕು ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

    ಉಡುಪಿ ಜಿಲ್ಲೆ ಯ ನೂತನ ತಾಲೂಕುಗಳಾದ ಬೈಂದೂರು, ಬ್ರಹ್ಮಾವರ, ಕಾಪು ಮತ್ತು ಹೆಬ್ರಿಯಲ್ಲಿ ತಲಾ 5 ಕೋಟಿ ರೂ ಗಳ ವೆಚ್ಚದಲ್ಲಿ ಮಿನಿ ವಿಧಾನ ಸೌಧ ನಿರ್ಮಿಸಲು ನಿರ್ಧರಿಸಿದ್ದು, ಜಿಲ್ಲಾಧಿಕಾರಿಗಳ ಮೂಲಕ ಶೀಘ್ರದಲ್ಲಿ ಪ್ರಸ್ತಾವನೆ ತಲುಪಿಸಿದಲ್ಲಿ, ಕೂಡಲೇ ಹಣ ಬಿಡುಗಡೆ ಮಾಡಲಾಗುವುದು ಎಂದು ಕಾಗೋಡು ಹೇಳಿದರು.

    ಕಳೆದ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು 50 ಹೊಸ ತಾಲೂಕುಗಳ ರಚನೆಗೆ ಘೋಷಣೆ ಮಾಡಿದ್ದು, 2018 ರ ಜನವರಿ 30 ರ ತನಕ ಸಂಬಂದಪಟ್ಟ ಎಲ್ಲಾ ಕ್ರಮ ಕೈಗೊಂಡು, ಆಕ್ಷೇಪಗಳನ್ನು ಆಹ್ವಾನಿಸಿ, ಅಂತಿಮ ಅಧಿಸೂಚನೆ ಹೊರಡಿಸಿ, ಪ್ರಸ್ತುತ 50 ಹೊಸ ತಾಲೂಕುಗಳಿಗೆ ಅಸ್ತಿತ್ವಕ್ಕೆ ತರಲಾಗಿದೆ, ಈ ಹೊಸ ತಾಲೂಕುಗಳಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಲಭ್ಯಗಳು ಹಾಗೂ ತಹಸೀಲ್ದಾರ್ ಗಳನ್ನು ನೇಮಕ ಮಾಡಿ, ಸಾರ್ವಜನಿಕರಿಗೆ ಎಲ್ಲಾ ರೀತಿಯ ಸೌಲಭ್ಯ ದೊರೆಯುವಂತೆ ಮಾಡಲಾಗುವುದು ಎಂದು ತಿಮ್ಮಪ್ಪ ಹೇಳಿದರು.

    ಈ ಭಾಗದಲ್ಲಿ ಭೂಮಿಗೆ ಸಂಬಂದಿಸಿದಂತೆ ಹಲವು ಸಮಸ್ಯೆಗಳಿದ್ದು, ಡ್ರೀಮ್ಡ್ ಫಾರೆಸ್ಟ್ ಸಮಸ್ಯೆ ಸಹ ಇದೆ, ಡ್ರೀಮ್ಡ್ ಫಾರೆಸ್ಟ್ ನಿಂದ ಅರಣ್ಯ ಭೂಮಿಯನ್ನು ಹೊರಗಿಡುವ ಕುರಿತಂತೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಸಿದ್ದವಾಗಿದ್ದು, ಶೀಘ್ರದಲ್ಲಿ ಪರಿಹಾರ ದೊರೆಯಲಿದೆ, ಹೆಬ್ರಿ ತಾಲೂಕಿಗೆ ಸಂಬಂದಿಸಿದಂತೆ ಸುಮಾರು 4000 ಭೂ ಸುಧಾರಣಾ ಅರ್ಜಿಗಳು ಬಾಕಿ ಇದ್ದು, ಬೇಗನೆ ಇತ್ಯರ್ಥಪಡಿಸಲಾಗುವುದು, ಉಡುಪಿ ಮತ್ತು ದ.ಕನ್ನಡ ಜಿಲ್ಲೆಗಳಲ್ಲಿ ಭೂಮಿ ವಿಷಯಕ್ಕೆ ಸಂಬಂದಪಟ್ಟ ಸಮಸ್ಯೆಗಳ ಪ್ರತ್ಯೇಕ ನಡೆಸಲು ಚಿಂತಿಸಲಾಗಿದೆ ಎಂದು ಸಚಿವರು ತಿಳಿಸಿದರು.

    ಹೊಸ ತಾಲೂಕುಗಳಲ್ಲಿ ಆಡಳಿತದಲ್ಲಿ ಹೊಸ ಶಕ್ತಿ ಬರಬೇಕು, ರಾಜ್ಯ ಸರ್ಕಾರ ಸ್ವಚ್ಛ ಮತ್ತು ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಿದ್ದು, ಕಂದಯ ಇಲಾಖೆಯಲ್ಲಿ ಪಾರದರ್ಶಕ ಆಡಳಿತ ನಡೆದರೆ ಎಲ್ಲಾ ಇಲಾಖೆಗಳಲ್ಲಿ ಪಾರದರ್ಶಕತೆ ಮೂಡಲಿದೆ, ಅಧಿಕಾರಿಗಳು ಕಾನೂನು ವ್ಯಾಪ್ತಿಯಲ್ಲಿ, ಜನಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಕಾಗೋಡು ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply