LATEST NEWS
ಸುರತ್ಕಲ್ – ಸುಂಟರಗಾಳಿಯ ಅಬ್ಬರ ಹೇಗಿತ್ತು ನೋಡಿ

ಮಂಗಳೂರು ಜುಲೈ 27: ಮಂಗಳೂರಿನಲ್ಲಿ ಈಗ ಮಳೆ ಜೊತೆ ಬೀಸುತ್ತಿರುವ ಸುಂಟರಗಾಳಿ ಅಪಾರ ಹಾನಿಯುಂಟು ಮಾಡುತ್ತಿದೆ. ಭಾರೀ ಮಳೆಜೊತೆ ಬೀಸುತ್ತಿರುವ ಸುಂಟರಗಾಳಿಯ ಅಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದೆ.
ಮುಂಗಾರು ಮಳೆ ಈ ಬಾರಿ ತನ್ನ ರೌದ್ರಾವತಾರ ತೋರಿಸಿದೆ. ಇತ್ತೀಚೆಗೆ ಮಳೆ ಜೊತೆ ಬೀಸುನ ಬಿರುಗಾಳಿ ಜನರ ನಿದ್ದೆಗೆಡಿಸಿದೆ. ಸುರತ್ಕಲ್ನ ಕಾಟಿಪಳ್ಳ, ಕೃಷ್ಣಾಪುರ ಭಾಗದಲ್ಲಿ ಮಳೆಯ ಜೊತೆಗೆ ಸುಂಟರಗಾಳಿ ಬೀಸಿದ್ದು, ಮನೆಯ ಮೇಲ್ಛಾವಣಿ ಹಾರಿಹೋಗಿದೆ. ಜೊತೆಗೆ ವಿದ್ಯುತ್ ಕಂಬ ಹಾಗೂ ಬೃಹತ್ ಮರಗಳು ಧರೆಗೆ ಉರುಳಿದೆ. ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಬಿರುಗಾಳಿ ಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದೆ.

ಇನ್ನು ಭಯಾನಕ ಸುಂಟರಗಾಳಿಯ ದೃಶ್ಯ, ಸ್ಥಳೀಯರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಷ್ಟೇ ಅಲ್ಲದೆ ಭಾರಿ ಮಳೆಯಿಂದಾಗಿ ಮಂಗಳೂರು ಬಳಿ ಮನೆ ಕುಸಿತವಾಗಿದೆ. ಮನೆಯಲ್ಲಿ ಯಾರೂ ಇಲ್ಲದಿದ್ದರಿಂದ ದುರಂತ ತಪ್ಪಿದೆ.