LATEST NEWS
ಕರಾವಳಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಕೆತ್ತಕಲಿನಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಕು

ಕರಾವಳಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಕೆತ್ತಕಲಿನಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಕು
ಮಂಗಳೂರು ಜೂನ್ 26: ಕರಾವಳಿಯಲ್ಲಿ ಕಳೆದ ವಾರದಿಂದಿಚೆಗೆ ಸುರಿಯುತ್ತಿರುವ ಭಾರಿ ಮಳೆಗೆ ಮಂಗಳೂರು ಹೊರವಲಯದ ವಾಮಂಜೂರು ಕೆತ್ತಿಕಲ್‌ನಲ್ಲಿ ಮತ್ತೆ ಭೂಕುಸಿತದ ಭೀತಿ ಉಂಟಾಗಿದೆ. ಮಂಗಳೂರು -ಕಾರ್ಕಳ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 169 ರ ವಾಮಂಜೂರು ಕೆತ್ತಕಲ್ಲಿನಲ್ ನಲ್ಲಿ ಹೆದ್ದಾರಿಯೇ ಬಿರುಕು ಬಿಟ್ಟಿದ್ದು, ಅಪಾಯವನ್ನು ಅಹ್ವಾನಿಸುವಂತಿದೆ.
ಈ ಭಾಗದ ಮೇಲಿಂದ ಬರುವ ಮಳೆ ನೀರು ಹರಿದು ಹೋಗಲು ಪಕ್ಕದ ಖಾಸಗಿ ಜಾಗದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇದೀಗ ಆ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಖರೀದಿಸಿ ಲೇ ಔಟ್ ಮಾಡಿದ್ದರ ಪರಿಣಾಮ ಇದೀದ ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲದೆ ಮುಖ್ಯ ಹೆದ್ದಾರಿ ಮೇಲೆಯೇ ಹರಿದುಹೋಗುತ್ತಿದೆ.

ಇದರ ಪರಿಣಾಮ ಹೆದ್ದಾರಿಲ್ಲಿ ಮಣ್ಣು ಸಡಿಲಗೊಂಡು ಹೆದ್ದಾರಿ ಬಿರುಕು ಬಿಡಲಾರಂಭಿಸಿದೆ. ಕಳೆದ ಕೆಲವು ದಿನಗಳಿಂದ ಮಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಇದೇ ರೀತಿ ಮಳೆ ಮುಂದುವರೆದರೆ ಹೆದ್ದಾರಿ ಕುಸಿಯುವ ಅಪಾಯ ಎದುರಾಗಿದೆ. ದಶಕಗಳ ಹಿಂದೆ ಇದೇ ಸ್ಥಳದಲ್ಲಿ ಭಾರಿ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿ ರಾಷ್ಟ್ರೀಯ ಸುದ್ದಿಯಾಗಿತ್ತು.
ಮಂಗಳೂರು ಹೊರವಲಯದಲ್ಲಿ ಮುಡಿಪು – ಬಿಸಿ ರೋಡ್ ರಸ್ತೆಯಲ್ಲಿ ಗುಡ್ಡ ಜರಿದು ಬಿದ್ದಿದೆ. ಈ ಪರಿಣಾಮ ಉಳ್ಳಾಲ – ಬಂಟ್ವಾಳ ನಡುವೆ ವಾಹನ ಸಂಪರ್ಕ ಸ್ಥಗಿತಗೊಂಡಿದೆ. ರಸ್ತೆ ಮೇಲೆ ಬಿದ್ದಿರುವ ಭಾರೀ ಪ್ರಮಾಣದ ಮಣ್ಣನ್ನು ತೆರವು ಗೊಳಿಸಿಲು ಕಾಮಗಾರಿ ಆರಂಭವಾಗಿದೆ.
ಈ ನಡುವೆ ಮಂಗಳೂರು ಹೊರವಲಯದ ಕೋಟೆಕಾರು ಬಳಿಯ ಕೊಂಡಾಣ ಪ್ರದೇಶದಲ್ಲಿ ತಗ್ಗುಪ್ರದೇಶಕ್ಕೆ ನೀರು ನುಗ್ಗಿದೆ. ಇದರಿಂದ ಸ್ಥಳೀಯ ಪರಿಸರದ ಹಲವು ಮನೆಗಳಿಗೆ ನೀರು ನುಗ್ಗಿದ್ದು ಪರಿಸರದ ಜನರು ಸಂಕಷ್ಟ ಪಡುವಂತಾಗಿದೆ. ರಸ್ತೆ ಕಾಮಗಾರಿ ನಡೆಯುತ್ತಿರುವ ಕಾರಣ ಚರಂಡಿ ಬಂದ್ ಆಗಿದ್ದರಿಂದ ನೀರು ಹರಿಯಲು ಸಾಧ್ಯವಾಗದೆ ಮನೆಗಳಿಗೆ ನುಗ್ಗಿದೆ. ಅಲ್ಲದೆ, ಗದ್ದೆ , ತೋಟಗಳಲ್ಲಿ ನೀರು ನಿಂತಿದ್ದು ನೀರಿನಲ್ಲಿಯೇ ರಸ್ತೆ ದಾಟುವಂತಾಗಿದೆ.