Connect with us

    DAKSHINA KANNADA

    ಸುಳ್ಯದ ಮಂಡೆಕೋಲು ಗ್ರಾಮದಲ್ಲಿ ಅತೀ ಹೆಚ್ಚು ಮಳೆ….!!

    ಮಂಗಳೂರು ಜುಲೈ 7 : ಸುಳ್ಯದ ಮಂಡೆಕೋಲು ಗ್ರಾಮದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಅತೀ ಹೆಚ್ಚು ಮಳೆ ದಾಖಲಾಗಿದೆ. ಜುಲೈ 6ರ ಬೆಳಿಗ್ಗೆ 8.30ರಿಂದ ಜುಲೈ 7ರ ಬೆಳಿಗ್ಗೆ 8.30ರ ಅವಧಿಯಲ್ಲಿ 211.5 ಮಿಲಿಮೀಟರ್ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ.


    24 ತಾಸುಗಳ ಅವಧಿಯಲ್ಲಿ ಹೆಚ್ಚು‌ ಮಳೆಯಾದ ಮೊದಲ ಹತ್ತು ಪ್ರದೇಶಗಳು ದಕ್ಷಿಣ ಕನ್ನಡ ಜಿಲ್ಲೆಯವು. ಸುಳ್ಯದ ಜಾಲ್ಸೂರಿನಲ್ಲಿ 175.5 ಮಿಮೀ, ಬಂಟ್ವಾಳ ತಾಲ್ಲೂಕಿನ ಸರಪಾಡಿಯಲ್ಲಿ 166 ಮಿಮೀ, ಬಂಟ್ವಾಳ ತಾಲ್ಲೂಕಿನ ಬಡಗಬೆಳ್ಳೂರಿನಲ್ಲಿ 161.5 ಮಿಮೀ, ಬೆಳ್ತಂಗಡಿ ತಾಲ್ಲೂಕಿನ ತೆಕ್ಕಾರುವಿನಲ್ಲಿ 159.5 ಮಿಮೀ, ಬಂಟ್ವಾಳ ತಾಲ್ಲೂಕಿನ ವಿಟ್ಲಮೂಡನೂರು ಗ್ರಾಮದಲ್ಲಿ 159 ಮಿಮೀ, ಮಂಗಳೂರು ನಗರದ ಮೂಡುಶೆಡ್ಡೆಯಲ್ಲಿ 159ಮಿಮೀ, ಸುಳ್ಯದ ಅಜ್ಜಾವರದಲ್ಲಿ 158 ಮಿಮೀ, ಬಂಟ್ವಾಳ ತಾಲ್ಲೂಕಿನ ಪಿಲಾತಬೆಟ್ಟುವಿನಲ್ಲಿ 155.5 ಮಿಮೀ, ಬಂಟ್ವಾಳ ತಾಲ್ಲೂಕಿನ ಕಾವಳ‌ ಡೂರಿನಲ್ಲಿ 153.5 ಮಿಮೀ ಮಳೆಯಾಗಿದೆ.
    ಕೊಡಗು ಜಿಲ್ಲೆ ಮಡಿಕೇರಿಯ‌ ಮದೆ ಗ್ರಾಮದಲ್ಲಿ 150 ಮಿಮೀ ಮಳೆ ಆಗಿದೆ. ಚಿಕ್ಕಮಗಳೂರು ಜಿಲ್ಲೆ‌ ಮೂಡಿಗೆರೆಯ ತ್ರಿಪುರಾದಲ್ಲಿ ಕನಿಷ್ಠ 68.5 ಮಿಮೀ ಮಳೆ ಆಗಿರುವುದಾಗಿ ತಿಳಿಸಲಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *