DAKSHINA KANNADA
ಪುತ್ತೂರು: ಭಾರೀ ಮಳೆಗೆ ಪಾತಾಳಕ್ಕೆ ಕುಸಿದ ಬಾವಿ…!
ಪುತ್ತೂರು, ಜುಲೈ 07: ಸುರಿಯುತ್ತಿರುವ ಭಾರೀ ಮಳೆಗೆ ಮನೆಯಂಗಳದಲ್ಲಿದ್ದ ಬಾವಿ ನೋಡು ನೋಡುತ್ತಿದ್ದಂತೆ ಪಾತಾಳಕ್ಕೆ ಕುಸಿದ ಘಟನೆ ನಡೆದಿದೆ.
ಪುತ್ತೂರು ನಗರಸಭಾ ವ್ಯಾಪ್ತಿಯ ಬಪ್ಪಳಿಕೆ ಎಂಬಲ್ಲಿ ಬಪ್ಪಳಿಗೆ ನಿವಾಸಿ ಸುಶೀಲ ಎಂಬವರಿಗೆ ಸೇರಿದ ಮನೆಯ ಬಾವಿ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಬಾವಿ ಕುಸಿದ ಪರಿಣಾಮ ಮನೆ ಅಪಾಯದಲ್ಲಿದ್ದು, ಪರಿಸರದ ಜನ ಆತಂಕ ಪಡುವಂತಾಗಿದೆ.
ಅಗ್ನಿಶಾಮಕದಳದಿಂದ ಮನೆ ಮಂದಿಯ ರಕ್ಷಣೆ ಕಾರ್ಯ ನಡೆದಿದದ್ದು, ಮನೆ ಮಂದಿಯನ್ನು ಅಗ್ನಿಶಾಮಕದಳದ ಸಿಬ್ಬಂದಿ ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಅಗ್ನಿಶಾಮಕದಳ ಸಿಬ್ಬಂದಿ ಮನೆ ಸುತ್ತಲೂ ತಾತ್ಕಾಲಿಕ ತಡೆ ಹಾಕಿದ್ದಾರೆ. ಸ್ಥಳಕ್ಕೆ ನಗರಸಭಾ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
You must be logged in to post a comment Login