LATEST NEWS
ಉಡುಪಿಯಲ್ಲಿ ಭಾರಿ ಮಳೆ: ಮಳೆ ರಜೆ ವಿಚಾರದಲ್ಲಿ ಗೊಂದಲ!
ಉಡುಪಿ, ಜುಲೈ 08: ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಮಳೆ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ರಜೆಯ ಗೊಂದಲ ಉಂಟಾಗಿದೆ.
ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಬೈಂದೂರು ಹಾಗು ಕುಂದಾಪುರದ ಕೆಲವೆಡೆ ಮಾತ್ರ ಶಾಲೆಗೆ ರಜೆ ನೀಡಲಾಗಿದೆ. ಉಡುಪಿ ತಾಲೂಕಿ ಶಾಲಾ ಕಾಲೇಜಿಗೆ ಬಿಇಒ ರಜೆ ನೀಡಿರಲಿಲ್ಲಾ.
ಕೆಲ ಕಾಲೇಜು ಆಡಳಿತ ಮಂಡಳಿಯಿಂದಲೇ ವಿದ್ಯಾರ್ಥಿಗಳಿಗೆ ರಜೆ ನೀಡಿದ್ದಾರೆ. ವಿದ್ಯಾರ್ಥಿಗಳು ಕಾಲೇಜಿಗೆ ಬಂದು ವಾಪಸ್ ಮಳೆಯಲ್ಲೇ ನೆನೆದುಕೊಂಡು ಕಾಲೇಜ್ ವಿದ್ಯಾರ್ಥಿಗಳು ತೆರಳಿದ್ದಾರೆ.