LATEST NEWS
ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆ ರಜೆ ನೀಡದ ಪ್ರತಿಷ್ಠಿತ ವಿಧ್ಯಾಸಂಸ್ಥೆಗಳು

ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆ ರಜೆ ನೀಡದ ಪ್ರತಿಷ್ಠಿತ ವಿಧ್ಯಾಸಂಸ್ಥೆಗಳು
ಮಂಗಳೂರು ಅಗಸ್ಟ್ 13: ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಿನ್ನೆಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದು ಇಂದು ಮುಂಜಾನೆಯಿಂದಲೇ ಮಂಗಳೂರಿನಲ್ಲಿ ಬಿರುಸಿನ ಮಳೆಯಾಗುತ್ತಿದೆ. ನಗರದಾದ್ಯಂತ ದಟ್ಟ ಮೋಡ ಆವರಿಸಿಕೊಂಡಿದ್ದು ಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ತಗ್ಗು ಪ್ರದೇಶದಲ್ಲಿ ಮತ್ತೆ ನೆರೆ ಭೀತಿ ಎದುರಾಗಿದೆ.
ಅರಬ್ಬೀ ಸಮುದ್ರದಲ್ಲಿ ಸ್ಟ್ರಾಂಗ್ ವೆಸ್ಟರ್ಲಿನ್ ಉಂಟಾದ ಪರಿಣಾಮ ಇನ್ನೂ ನಾಲ್ಕು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಆನೆಗುಂಡಿ, ಜಪ್ಪಿನಮೊಗರು, ಕುದ್ರೋಳಿ, ಅಳಕೆ, ಮಾಲೆಮಾರ್ ಪ್ರದೇಶಗಳ ಮೇಲೆ ಜಿಲ್ಲಾಡಳಿತ ಮತ್ತು ಪಾಲಿಕೆ ತೀವ್ರ ನಿಗಾ ವಹಿಸಿದೆ.
ಈ ನಡುವೆ ಇಂದು ಜಿಲ್ಲೆಯ ಎಲ್ಲಾ ಶಾಲಾ ಮತ್ತು ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ನಿನೆ ಆದೇಶ ಹೊರಡಿಸಿದ್ದರು. ಆದರೆ ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ಕೆಲವು ಪ್ರತಿಷ್ಠಿತ ಕಾಲೇಜುಗಳು ಸೇರಿದಂತೆ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ರಜೆ ನೀಡಿಲ್ಲ.