LATEST NEWS
ಕರಾವಳಿಯಲ್ಲಿ ಮಳೆ ಅಬ್ಬರ – ಕಡಲು ಪ್ರಕ್ಷುಬ್ಧ: ಮೀನುಗಾರಿಕೆಗೆ ವಿಘ್ನ!

ಮಲ್ಪೆ ಸೆಪ್ಟೆಂಬರ್ 13: ಕಳೆದ ಕೆಲವು ದಿನಗಳಿಂದ ಉಡುಪಿಯಲ್ಲಿ ನಿರಂತರ ಸುರಿಯುತ್ತಿರುವ ಗಾಳಿಮಳೆಯಿಂದಾಗಿ ಆಳ ಸಮುದ್ರ ಪ್ರಕ್ಷುಬ್ಧಗೊಂಡಿದೆ.ಇದರ ಪರಿಣಾಮವಾಗಿ ಬೋಟ್‌ಗಳು ಮೀನುಗಾರಿಕೆ ನಡೆಸಲಾಗದೆ ದಡದತ್ತ ಬಂದಿವೆ.
ತಿಂಗಳ ಹಿಂದೆಯಷ್ಟೆ ಮೀನುಗಾರಿಕೆ ಋತು ಆರಂಭವಾಗಿ ಉತ್ತಮ ಮೀನುಗಾರಿಕೆಯ ನಿರೀಕ್ಷೆಯಲ್ಲಿ ಮೀನುಗಾರರಿದ್ದರು, ಉತ್ತಮ ಮೀನುಗಾರಿಕೆ ಆಗುತ್ತಿತ್ತು. ಆದರೆ ಮತ್ತೆ ಪ್ರಾಕೃತಿಕ ವೈಪರೀತ್ಯ ಉಂಟಾಗಿದೆ. ಕೊಂಚ ಆದಾಯ ಗಳಿಸುವಷ್ಟರಲ್ಲೇ ಮತ್ತೆ ಪ್ರಕ್ಷುಬ್ಧ ವಾತಾವರಣದಿಂದ ಮೀನುಗಾರಿಕೆ ನಡೆಸದಂತಾಗಿದೆ.

ಕಳೆದ ಎರಡು ಮೂರು ದಿನಗಳಿಂದ ಸಮುದ್ರದಲ್ಲಿ ಗಾಳಿಯಿಂದಾಗಿ ನೀರಿನ ಒತ್ತಡವೂ ಹೆಚ್ಚಾಗಿದೆ. ಮಲ್ಪೆ ಬಂದರಿನಲ್ಲಿ ಶೇ. 60ರಷ್ಟು ಬೋಟ್‌ಗಳು ಲಂಗರು ಹಾಕಿದ್ದು,ಗಾಳಿಮಳೆ ನಿಂತ ಬಳಿಕ ಮೀನುಗಾರಿಕೆಗೆ ತೆರಳಲಿವೆ.