LATEST NEWS
ಕರಾವಳಿಯಲ್ಲಿ ಇನ್ನೆರಡು ದಿನ ಭಾರೀ ಮಳೆ ಸಾಧ್ಯತೆ ..!!
ಮಂಗಳೂರು ಸೆಪ್ಟೆಂಬರ್ 10: ಕರಾವಳಿಯಲ್ಲಿ ಮುಂಗಾರು ಮಳೆ ಇನ್ನು ಮುಂದುವರೆದಿದ್ದು, ಕಳೆದ ವಾರದಿಂದ ಸುರಿಯುತ್ತಿರುವ ಮಳೆ ಸೆಪ್ಟೆಂಬರ್ 11 ರವರೆಗೆ ಮಂದುವರೆಯಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಹವಾಮಾನ ಇಲಾಖೆಯ ಪ್ರಕಾರ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಇಲಾಖೆಯ ಪ್ರಕಾರ ಸೆಪ್ಟೆಂಬರ್ 11ರವರೆಗೆ ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗುವ ಸಂಭವ ಇದೆ. ರಾಜ್ಯದಲ್ಲಿ ಬಿದ್ದ ಮಳೆಯನುಸಾರ ಉಡುಪಿಯ ಕೊಲ್ಲೂರು ಭಾಗದಲ್ಲಿ 9 ಮಿ.ಮೀ , ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 4 ರಿಂದ 5 ಮಿ.ಮೀ. ಮಳೆಯಾಗಿದೆ.
ಬುಧವಾರದಿಂದ ಗುರುವಾರ ಬೆಳಗ್ಗೆವರೆಗೆ ಜಿಲ್ಲೆಯಲ್ಲಿ 18.6 ಮಿ.ಮೀ ಮಳೆಯಾಗಿದೆ. ಬೆಳ್ತಂಗಡಿಯಲ್ಲಿ 31 ಮಿ.ಮೀ, ಬಂಟ್ವಾಳ 11.4 ಮಿ.ಮೀ, ಮಂಗಳೂರು 14.4 ಮಿ.ಮೀ, ಪುತ್ತೂರು 13.6 ಮಿ.ಮೀ, ಸುಳ್ಯದಲ್ಲಿ 9.4 ಮಿ.ಮೀ, ಮೂಡುಬಿದಿರೆ 21.2 ಮಿ.ಮೀ, ಕಡಬದಲ್ಲಿ 16.9 ಮಿ.ಮೀ ಮಳೆಯಾಗಿದೆ.
ಉಡುಪಿ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 39.7ಮಿ. ಮೀ. ಮಳೆ ದಾಖಲಾಗಿದೆ. ಉಡುಪಿ: 41.3 ಮಿ.ಮೀ., ಬ್ರಹ್ಮಾವರ: 37.9 ಮಿ. ಮೀ., ಕಾಪು: 24.5 ಮಿ.ಮೀ., ಕುಂದಾಪುರ: 36.3 ಮಿ.ಮೀ., ಬೈಂದೂರು: 30.2 ಮಿ. ಮೀ., ಕಾರ್ಕಳ: 31.5 ಮಿ.ಮೀ., ಹೆಬ್ರಿ: 79.8 ಮಿ. ಮೀ. ಮಳೆ ಬಿದ್ದಿದೆ.