Connect with us

LATEST NEWS

ಭಾರಿ ಮಳೆ – ಅಪಾಯದಲ್ಲಿರುವ ಬೃಹತ್ ಬಹುಮಹಡಿ ಕಟ್ಟಡ

ಭಾರಿ ಮಳೆ – ಅಪಾಯದಲ್ಲಿರುವ ಬೃಹತ್ ಬಹುಮಹಡಿ ಕಟ್ಟಡ

ಮಂಗಳೂರು ಸೆಪ್ಟೆಂಬರ್ 16: ಮಂಗಳೂರು ಹೃದಯ ಭಾಗದಲ್ಲಿರುವ ಬೃಹತ್ ಬಹುಮಡಿ ಕಟ್ಟಡ ಒಂದು ಭಾರಿ ಅಪಾಯ ಸ್ಥಿತಿ ತಲುಪಿದೆ. ಕಳೆದ ಕೆಲವು ದಿನಗಳಿಂದ ಮಂಗಳೂರಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಬಹು ಮಹಡಿ ಕಟ್ಟಡದ ತಡೆಗೋಡೆಗಳು ಕುಸಿಯುತ್ತಿವೆ .


ನಗರದ ಬಾವುಟಗುಡ್ಡೆಯ ಟಾಗೋರ್ ಪಾರ್ಕ್ ಬಳಿ ನಿರ್ಮಾಣ ಹಂತದಲ್ಲಿರುವ ಬಹುಮಡಿ ಕಟ್ಟಡ ಅಪಾಯದಲ್ಲಿದೆ .15 ಕ್ಕೂ ಅಧಿಕ ಅಂತಸ್ತಿನ ಈ ಬಹುಮಹಡಿ ಕಟ್ಟಡದ ನಿರ್ಮಾಣ ಕಾಮಗಾರಿ ಭಾಗಶಃ ಪೂರ್ಣಗೊಂಡಿದೆ. ಈ ಕಟ್ಟಡ ಬಾವುಟ ಗುಡ್ಡದ ತೀರಾ ಅಂಚಿನಲ್ಲಿ ಕಟ್ಟಿರುವ ಹಿನ್ನೆಲೆಯಲ್ಲಿ ಮಳೆಗೆ ಮಣ್ಣು ಕುಸಿಯುತ್ತಿದೆ. ಈ ಪರಿಣಾಮ ಕಟ್ಟಡದ ತಡೆಗೋಡೆಗಳು ಕುಸಿಯಲಾರಂಭಿಸಿದೆ. ಕಟ್ಟಡದ ಕೆಳ ಭಾಗದಲ್ಲಿರುವ ಕ್ಲಾಸಿಕ್ ಅಪಾರ್ಟ್ ಮೆಂಟ್ ಮೇಲೆ ತಡೆಗೋಡೆ ಕುಸಿದು ಬಿದ್ದಿದ್ದು ಅಲ್ಲಿ ಪಾರ್ಕ್ ಮಾಡಲಾಗಿದ್ದ ವಾಹನಗಳು ಜಖಂಗೊಂಡಿವೆ.

ಬಾವುಟ ಗುಡ್ಡದ ಮೇಲೆ ಧಾರಣಾ ಸಾಮರ್ಥ್ಯಕ್ಕಿಂತ ಹೆಚ್ಚಿನ ಒತ್ತಡ ಹೇರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಎರಡು ಬಾರಿ ಭೂಕಂಪದ ಅನುಭವ ಕೂಡ ಆಗಿದೆ . ಇಂತಹ ಅಪಾಯ ಪ್ರದೇಶದಲ್ಲಿ ಬಹುಮಡಿ ಕಟ್ಟಡ ಕಟ್ಟಲು ಅನುಮತಿ ನೀಡಿದವರಾರು ಎನ್ನುವ ಪ್ರಶ್ನೆ ಈಗ ಕಾಡುತ್ತಿದೆ.

ಈ ಬಹುಮಹಡಿ ಕಟ್ಟಡದ ಕೆಳಗೆ ಮೂರು ಅಪಾರ್ಟ್ಮೆಂಟ್ ಗಳು ಇದ್ದು ಅವುಗಳ ಮೇಲೆ ಈ ಬಹುಮಹಡಿ ಕಟ್ಟಡ ಕುಸಿದು ಬೀಳುವ ಅಪಾಯ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಕೂಡಲೇ ಎಚ್ಚೆತ್ತುಕೊಳ್ಳಬೇಕಾಗಿದೆ. ಇಲ್ಲದಿದ್ದಲ್ಲಿ ಮುಂಬರು ದಿನಗಳಿ ಈ ಬಹುಮಹಡಿ ಕಟ್ಟಡ ಭಾರಿ ಅನಾಹುತಕ್ಕೆ ಕಾರಣವಾಗಿದೆ.

VIDEO

Share Information
Continue Reading
Advertisement
Click to comment

Leave a Reply

Your email address will not be published. Required fields are marked *