LATEST NEWS
ಮಂಗಳೂರಿನಲ್ಲಿ ಮಳೆಯ ಅವಾಂತರ : ಅಪಾರ್ಟ್ ಮೆಂಟಿನ ಜನ ತತ್ತರ

ಮಂಗಳೂರಿನಲ್ಲಿ ಮಳೆಯ ಅವಾಂತರ : ಅಪಾರ್ಟ್ ಮೆಂಟಿನ ಜನ ತತ್ತರ
ಮಂಗಳೂರು, ಎಪ್ರಿಲ್ 15 : ಶನಿವಾರ ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಭಾಗಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದೆ.
ಮಂಗಳೂರು ನಗರದಲ್ಲೂ ಶನಿವಾರ ಮಧ್ಯರಾತ್ರಿ ಸುಮಾರಿಗೆ ಭಾರಿ ಮಳೆಯಾಗಿದೆ. ನಗರದ ಅನೇಕ ಕಡೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸಮಸ್ಯೆಗಳಾಗಿವೆ.

ಮಂಗಳೂರು ನಗರದ ಬಿಜೈ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಪಕಕದಲ್ಲಿರುವ ಶಾಖಾಂಬರಿ ಅಪಾರ್ಟ್ ಮೆಂಟಿಗೆ ಮಧ್ಯ ರಾತ್ರಿ ಪಕ್ಕದ ಒಳ ಚರಂಡಿಯ ಕೊಳಚೆ ನೀರು ನುಗ್ಗಿದೆ.
ಈ ಅಪಾರ್ಟ್ ಮೇಮಟಿನಲ್ಲಿ 100 ಕ್ಕೂ ಅಧಿಕ ಕುಟುಂಬಗಳಿವೆ.
ನೀರು ನುಗ್ಗಿದ ಪರಿಣಾಮ ಅಪಾರ್ಟ್ ಮೆಂಟ್ ನಿವಾಸಿಗಳ ಕಾರು ಶೆಡ್,ಲಿಫ್ಟ್ ರೂಮಿಗೂ ನೀರು ನುಗ್ಗಿದೆ.
ಕೊಳಚೆ ನೀರು ಹರಿದ ಪರಿಣಾಮ ಅಪಾರ್ಟ್ ಮೆಂಟಿನ ನೆಲದಡಿಯ ನೀರು ಶೇಖರಣಾ ಟ್ಯಾಂಕಿನಲ್ಲಿಯ ನೀರು ಹಾಳಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ನೀರು ಹಾಳಾದ ಪರಿಣಾಮ ವಿಶು ಹಬ್ಬ ಆಚರಣೆಗೂ ಅಡ್ಡಿಯಾಗಿದೆ.
ರಸ್ತೆಯೆಲ್ಲಾ ಕೆಸರುಮಯವಾದ ಕಾರಣ ಅಪಾರ್ಟ್ ಮೆಂಟ್ ನಿವಾಸಿಗಳು ರಸ್ತೆಗೆ ಇಳಿಯಲಾಗದೆ ಗೃಹ ಬಂಧನದಲ್ಲಿದ್ದಾರೆ.
ಕೊಳಚೆ ನೀರಿನಲ್ಲಿ ಕಸ ಇತರ ಕೊಳೆತ ಕಲ್ಮಶಗಳು ಬಂದು ಸೇರಿರುವುದರಿಂದ ಇವುಗಳ ವಾಸನೆಯಿಂದ ಅಪಾರ್ಟ್ ಮೆಂಟ್ ನಿವಾಸಿಗಳ ಬದುಕು ನರಕಮಯವಾಗಿದೆ.
ಪಕ್ಕದ ಕೆಎಸ್ ಆರ್ ಟಿಸಿ, ಭಾರತ್ ಮಾಲ್ , ಗಣೇಶ್ ಬೀಡಿಯವರಿಂದ ಈ ಸಮಸ್ಯೆ ಉಂಟಾಗಿದೆ .
ಪಾಲಿಕೆನೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಫೋನ್ ಮಾಡಿದರೂ ಎತ್ತುತ್ತಿಲ್ಲ.
ಚುನಾವಣೆಯ ಸಮಯದಲ್ಲಿ ಓಟ್ ಮಾತ್ರ ಬೇಕು ಎಂದು ಅಪಾರ್ಟ್ ಮೆಂಟ್ ನಿವಾಸಿಗಳು ದೂರಿದ್ದಾರೆ.