Connect with us

    KARNATAKA

    ಮಲೆನಾಡಲ್ಲಿ ಮಳೆ ಅಬ್ಬರ – ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗಡೆ

    ಚಿಕ್ಕಮಗಳೂರು ಜುಲೈ 23 : ಮಲೆನಾಡ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಗಾಳಿ-ಮಳೆ ಅಬ್ಬರಕ್ಕೆ ಬೃಹತ್ ಮರ ರಸ್ತೆಗೆ ಉರುಳಿಬಿದ್ದು ಟ್ರಾಫಿಕ್ ಜಾಮ್ ಆದ ಘಟನೆ ತಾಲೂಕಿನ ವಸ್ತಾರೆ ಬಳಿ ನಡೆದಿದೆ.


    ಘಟನೆಯ ಪರಿಣಾಮ ಕಡೂರು-ಮಂಗಳೂರು, ರಾ.ಹೆ.173 ಕಡಿತಗೊಂಡಿದ್ದು, ವಾಹನಗಳು ರಸ್ತೆಯಲ್ಲಿ ಸಾಲಾಗಿ ನಿಂತಿದ್ದು, ಚಿಕ್ಕಮಗಳೂರು-ಮಂಗಳೂರು ಸಂಪರ್ಕ ಕಡಿತಗೊಂಡಿದ್ದರಿಂದ ಬೇರೆ ದಾರಿಯಿಂದಾಗಿ 20 ಕಿ.ಮೀ. ಸುತ್ತಿಕೊಂಡು ವಾಹನಗಳು ಹೋಗುತ್ತಿದೆ.


    ಇನ್ನು ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಕಾಫಿನಾಡಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿರುವ ಹಿನ್ನೆಲೆ ಸೇತುವೆ ಮುಳುಗಡೆಯಾಗಿದ್ದು, ಸೇತುವೆ ಮೇಲೆ 2 ಅಡಿಯಷ್ಟು ನೀರು ಹರಿಯುತ್ತಿದೆ. ಇದರ ಪರಿಣಾಮ ಕಳಸ – ಹೊರನಾಡು ಸಂಪರ್ಕ ಕಡಿತಗೊಂಡಿದೆ. ಭಾರೀ ಮಳೆಯಿಂದಾಗಿ ಸುತ್ತ ಹತ್ತಾರು ಹಳ್ಳಿಯ ಜನರು ಸಂಪರ್ಕವನ್ನು ಕಳೆದುಕೊಂಡಿದ್ದಾರೆ. ಅನ್ಯ ಮಾರ್ಗವಿದ್ದರೂ 8ರಿಂದ 10 ಕಿಲೋ ಮೀಟರ್ ಸುತ್ತಿಕೊಂಡು ಬರಬೇಕಾದ ಪರಿಸ್ಥಿತಿ ಎದುರಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply