LATEST NEWS
ಎಸ್ ಇ ಝೆಡ್ ತಡೆಗೋಡೆ ಕುಸಿತ ಸಂಪೂರ್ಣ ಜಲಾವೃತವಾದ ದೊಡ್ಡಿಕಟ್ಟ ಪ್ರದೇಶ

ಎಸ್ ಇ ಝೆಡ್ ತಡೆಗೋಡೆ ಕುಸಿತ ಸಂಪೂರ್ಣ ಜಲಾವೃತವಾದ ದೊಡ್ಡಿಕಟ್ಟ ಪ್ರದೇಶ
ಮಂಗಳೂರು ಜೂನ್ 22: ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿದ್ದ ತಡೆಗೋಡೆ ಕುಸಿದ ಪರಿಣಾಮ ಬಜ್ಪೆ ಬಳಿಯ ದೊಡ್ಡಿಕಟ್ಟ ಎಂಬ ಪ್ರದೇಶದಲ್ಲಿ ನೀರು ನುಗ್ಗಿ ಅವಾಂತರ ಸೃಷ್ಠಿಸಿದೆ.
ಇಂದು ಬೆಳಿಗಿನ ಜಾವ ಈ ಘಟನೆ ನಡೆದಿದ್ದು , ಎಸ್ ಇ ಝಡ್ ಅವರು ನೀರು ಹರಿಯುವ ತೋಡಿನ ತಡೆಗೋಡೆ ನಿರ್ಮಿಸಿದ್ದರು. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಹಿನ್ನಲೆಯಲ್ಲಿ ಈ ತಡೆಗೊಡೆ ಕುಸಿತ ಕಂಡಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ತಡೆಗೊಡೆ ಬಳಿಯ ಇರುವ ದೊಡ್ಡಿಕಟ್ಟ ಪ್ರದೇಶ ಸಂಪೂರ್ಣ ಜಲಾವೃತವಾಗಿದೆ. ದೊಡ್ಡಿಕಟ್ಟ ಸಮೀಪದ ದೇವಸ್ಥಾನ, ಪರಿಸರದ ಮನೆಗಳ ಸಂಪೂರ್ಣ ಮುಳುಗಡೆಯಾಗಿದ್ದು ಅಪಾರ ಪ್ರಮಾಣ ಹಾನಿಯುಂಟಾಗಿದೆ. ಸ್ಥಳದಲ್ಲಿಯೇ ಇರುವ ಸಾಪ್ಟವೇರ್ ಕಂಪನಿ ಒಂದರ ಒಳಗೂ ನೀರು ಹರಿದಿದೆ. ಈಗ ನೀರಿನ ಪ್ರಮಾಣ ಕಡಿಮೆಯಾಗಿದ್ದು. ಸ್ಥಳೀಯ ಜನ ಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.