Connect with us

    LATEST NEWS

    ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಲಾರಿ ಟ್ಯಾಕರ್ ನಡುವೆ ಡಿಕ್ಕಿ ಮೂವರಿಗೆ ಗಾಯ

    ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಲಾರಿ ಟ್ಯಾಕರ್ ನಡುವೆ ಡಿಕ್ಕಿ ಮೂವರಿಗೆ ಗಾಯ

    ಉಡುಪಿ ಜೂನ್ 22: ಲಾರಿಯೊಂದಕ್ಕೆ ಟ್ಯಾಂಕರ್ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಉಡುಪಿಯಲ್ಲಿ ನಡೆದಿದೆ.
    ಉಡುಪಿ ಕಾಪು ತಾಲೂಕಿನ ಪಾಂಗಳ ಜಂಕ್ಷನ್ ನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ಘಟನೆ ನಡೆದಿದ್ದು, ಲಾರಿಗೆ ಹಿಂಬದಿಯಿಂದ ಢಿಕ್ಕಿಯಾದ ಟ್ಯಾಂಕರ್ ಪಲ್ಟಿ ಹೊಡೆದಿದೆ.

    ಅಪಘಾತದ ರಭಸಕ್ಕೆ ಲಾರಿಯ ಒಳಗೆ ಚಾಲಕ ಸಿಕ್ಕಿ ಹಾಕಿಕೊಂಡಿದ್ದು, ಲಾರಿ ಚಾಲಕನನ್ನು ಹೊರ ತೆಗೆಯಲು ಸ್ಥಳೀಯರ ಹರಸಾಹಸ ಪಟ್ಟಿದ್ದಾರೆ. ಕಾಪು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಭಾರಿ ಮಳೆ ಹಿನ್ನಲೆಯಲ್ಲಿ ರಕ್ಷಣಾ ಕಾರ್ಯಕ್ಕೆ ತೊಡಕಾಗಿತ್ತು. ಅಪಘಾತದ ಹಿನ್ನಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು. ಈ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply