Connect with us

    LATEST NEWS

    ವೇಶ್ಯಾವಾಟಿಕೆ ಜಾಲದ ಮೇಲೆ ದಾಳಿ ಆರು ಮಂದಿ ಬಾಂಗ್ಲಾ ಮೂಲದ ಯುವತಿಯರ ರಕ್ಷಣೆ

    ವೇಶ್ಯಾವಾಟಿಕೆ ಜಾಲದ ಮೇಲೆ ದಾಳಿ ಆರು ಮಂದಿ ಬಾಂಗ್ಲಾ ಮೂಲದ ಯುವತಿಯರ ರಕ್ಷಣೆ

    ಮಂಗಳೂರು ಜೂನ್ 22:ಮಂಗಳೂರು ಲಾಡ್ಜ್ ವೊಂದರಲ್ಲಿ ನಡೆಯುತ್ತಿರುವ ವೇಶ್ಯಾವಾಟಿಕೆ ಜಾಲದ ಮೇಲೆ ಪೊಲೀಸರು ದಾಳಿ ನಡೆಸಿ ಆರು ಮಂದಿ ಬಾಂಗ್ಲಾ ಮೂಲದ ಯುವತಿಯರನ್ನು ರಕ್ಷಿಸಿದ ಘಟನೆ ನಡೆದಿದೆ.

    ಮಂಗಳೂರು ಪಂಪ್ ವೆಲ್ ನಲ್ಲಿರುವ ಅನ್ನಪೂರ್ಣ ಲಾಡ್ಜ್ ನಲ್ಲಿ ಈ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಅನ್ನಪೂರ್ಣ ಲಾಡ್ಜ್ ನ ರಹಸ್ಯ ಕೊಠಡಿಯಲ್ಲಿ ಯುವತಿಯರನ್ನು ಕೂಡಿ ಹಾಕಿ ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು ಎಂದು ಹೇಳಲಾಗಿದೆ.

    ಪೊಲೀಸರು ಈ ರಹಸ್ಯ ಕೊಠಡಿ ಒಡೆದು ಬಾಂಗ್ಲಾದೇಶದ ಆರು ಯುವತಿಯರ ರಕ್ಷಣೆ ಮಾಡಿದ್ದಾರೆ. ದಾಳಿ ಸಂದರ್ಭದಲ್ಲಿ ಬಾಂಗ್ಲಾ ಕರೆನ್ಸಿ, ಐಡಿ ಕಾರ್ಡ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಮೈಸೂರಿನ ಒಡನಾಡಿ ಸಂಘ ಹಾಗೂ ಚೈಲ್ಡ್ ಲೈನ್ ಸಂಸ್ಧೆ ನೀಡಿದ ಮಾಹಿತಿ ಆಧಾರದಲ್ಲಿ ಈ ದಾಳಿ ನಡೆದಿದೆ. ಈ ವೇಶ್ಯಾವಾಟಿಕೆಯ ಕಿಂಗ್ ಪಿನ್ ಶಿವರಾಮ ಪೂಜಾರಿ ಎಸ್ಕೇಪ್ ಆಗಿದ್ದು, 15 ಯುವಕರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ನಾಲ್ವರು ಅಪ್ರಾಪ್ತ ಯುವತಿಯರು ಪರಾರಿಯಾಗಿರುವ ಶಂಕೆ ವ್ಯಕ್ತಪಡಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply