LATEST NEWS
ನವೆಂಬರ್ ತಿಂಗಳ ಉರಿ ಬಿಸಿಲಿಗೆ ಹೈರಾಣಾದ ಕರಾವಳಿ ಜನತೆ
ನವೆಂಬರ್ ತಿಂಗಳ ಉರಿ ಬಿಸಿಲಿಗೆ ಹೈರಾಣಾದ ಕರಾವಳಿ ಜನತೆ
ಮಂಗಳೂರ ನ.23: ಬೆಸಿಗೆಯಲ್ಲಿ ಇರಬೇಕಾದ ಸೆಕೆ ಈ ಬಾರಿ ಕರಾವಳಿಯಲ್ಲಿ ಚಳಿಗಾಲದ ಆರಂಭದಲ್ಲಿ ಪ್ರಾರಂಭವಾಗಿದ್ದು, ಕರಾವಳಿಯಲ್ಲಿ ಬೆಳಿಗ್ಗೆಯಿಂದಲೇ ಬಿಸಿಲಿ ಪ್ರಖರತೆ ಕಾಣ ಸಿಗುತ್ತಿದ್ದು, ಕರಾವಳಿಯಲ್ಲಿ ಕಳೆದ 11 ವರ್ಷಗಳಲ್ಲೇ ನವೆಂಬರ್ ತಿಂಗಳಲ್ಲಿ ಅತ್ಯಧಿಕ ತಾಪಮಾನ ದಾಖಲಾಗಿದೆ.
ಹವಮಾನಾ ವೈಪರೀತ್ಯ, ಎರಡೆರಡು ಚಂಡಮಾರುತಗಳ ಹಾವಳಿಗೆ ಎಡೆಬಿಡದೇ ಮಳೆ ಸುರಿದರೂ, ಕರಾವಳಿಯಲ್ಲಿ ಈಗ ಭಾರಿ ಉರಿ ಬಿಸಿಲು ಆರಂಭವಾಗಿದೆ. ಸಾಮಾನ್ಯವಾಗಿ ನವೆಂಬರ್ ತಿಂಗಳಿನಲ್ಲಿ ಹಿಂಗಾರು ಮಳೆ ಬೀಳುತ್ತದೆ. ಸಂಜೆ ಅಥವಾ ರಾತ್ರಿ ಸಮಯದಲ್ಲಿ ಒಂದೆರಡ ಮಳೆ ಬೀಳುವುದು ವಾಡಿಕೆ. ಆದರೆ ಈ ಬಾರಿ ಹಿಂಗಾರು ಮಳೆ ಕ್ಷೀಣಿಸಿದ್ದು, ವಾಡಿಕೆ ಮಳೆಯೂ ಇಲ್ಲದಂತಾಗಿದೆ.
ನಗರದಲ್ಲಿ ಬೆಳಿಗೆ 9 ಗಂಟೆಯ ನಂತರ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಾ ಹೋಗಿ ಮಧ್ಯಾಹ್ನದ ವೇಳೆ ಬಿಸಿಲಿನ ತಾಪ ತೀವೃವಾಗಿದೆ. ಈ ಹಿನ್ನಲೆಯಲ್ಲಿ ಮಧ್ಯಾಹ್ನದ ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಕಡಿಮೆಯಾಗುತ್ತಿದ್ದು, ಸಾರ್ವಜನಿಕರ ಓಡಾಟವೂ ವಿರಳವಾಗುತ್ತಿದೆ. ಇನ್ನು, ಬೀದಿ ವ್ಯಾಪಾರಸ್ಥರು ಕೂಡ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಚಳಿಗಾಲದ ಪ್ರಾರಂಭದ ಹಿನ್ನಲೆ ನವೆಂಬರ್ ತಿಂಗಳಲ್ಲಿ ಸ್ವಲ್ಪಮಟ್ಟಿನ ಚಳಿಯ ಅನುಭವ ಇರುತ್ತದೆ. ಆದರೆ ಈಗ ಕಳೆದ ಹನ್ನೊಂದು ವರ್ಷಗಳಲ್ಲೇ ಅತೀ ಹೆಚ್ಚು ಅಂದರೆ 37 ಡಿ.ಸೆ. ತಾಪಮಾನ ದಾಖಲಾಗಿದೆ. ಹವಾಮಾನ ಇಲಾಖೆ ಅಂಕಿ ಅಂಶದ ಪ್ರಕಾರ ನವೆಂಬರ್ ತಿಂಗಳಿನಲ್ಲಿ 2008ರಲ್ಲಿ 36.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿತ್ತು. ಇದೀಗ 11 ವರ್ಷಗಳ ಬಳಿಕ ಅಂದರೆ 2019ರ ನವೆಂಬರ್ 19ರಂದು 37 ಡಿ.ಸೆ. ತಲುಪಿದೆ.