LATEST NEWS
19 ವರ್ಷದ ಆನೆಯನ್ನು ಮರಕ್ಕೆ ಕಟ್ಟಿಹಾಕಿ ಕೋಲಿನಿಂದ ಭಾರಿಸಿದ ಮಾವುತ…ವಿಡಿಯೋ ವೈರಲ್

ಕೇರಳ : ಗರ್ಭಿಣಿ ಆನೆಗೆ ಹಣ್ಣಿನಲ್ಲಿ ಸ್ಪೋಟಕ ತುಂಬಿಸಿ ಸಾಯುವಂತೆ ಮಾಡಿದ್ದ ಕೇರಳದಲ್ಲಿ ಇದೀಗ ಆನೆಯ ಮೇಲೆ ಮತ್ತೊಂದು ಅಮಾನುಷ ಕೃತ್ಯ ಬಯಲಾಗಿದೆ. ಆನೆಗಳ ಶಿಬಿರದಲ್ಲಿ ಮರಕ್ಕೆ ಕಟ್ಟಿಹಾಕಿದ್ದ ಆನೆಯನ್ನು ಮಾವುತ ಮತ್ತು ಅವನ ಸಹಾಯಕರು ಕೋಲಿನಿಂದ ಹೊಡೆಯುತ್ತಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗಿದೆ.
ಈ ಘಟನೆ ನಡೆದಿದ್ದು ಕೇರಳದ ಮೆಟ್ಟುಪಾಳಯಂ ನ ತೆಕ್ಕಾಂಪಟ್ಟಿ ಎಂಬಲ್ಲಿರುವ ಆನೆ ಪುನರ್ವಸತಿ ಕೇಂದ್ರದಲ್ಲಿ. ಈ ಕೇಂದ್ರದಲ್ಲಿ ಕೇರಳದ ದೇವಸ್ಥಾನಗಳು ಹಾಗೂ ಮಠಗಳಲ್ಲಿರುವ ಆನೆಗಳಿಗೆ ವರ್ಷದಲ್ಲಿ ಒಂದ ಸಲ 48 ದಿನಗಳ ಕಾಲ ಆನೆಗಳ ಪುನರ್ವಸತಿ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ನಡೆಯುತ್ತಿದೆ. ಈ ಹಿನ್ನಲೆ ಕೇರಳದ ಶ್ರೀವಿಲ್ಲಿಪುಥೂರಿನ ಅಂದಾಲ್ ದೇವಸ್ಥಾನಕ್ಕೆ ಸೇರಿದ್ದ ಜಯಮಾಲ್ಯಾಥಾ ಎಂಬ ಹೆಸರಿನ 19 ವರ್ಷ ಆನೆಯನ್ನು ಈ ಶಿಬಿರಕ್ಕೆ ಕಳುಹಿಸಿಕೊಡಲಾಗಿತ್ತು. ಈ ಶಿಬಿರದಲ್ಲಿರುವ ಮಾವುತರು ಆನೆ ತಮ್ಮ ಮಾತನ್ನು ಕೇಳದ ಹಿನ್ನಲೆ ಮರಕ್ಕೆ ಕಟ್ಟಿ ಹಾಕಿ ಕೊಲಿನಿಂದ ಹೊಡೆದಿದ್ದಾರೆ. ಈ ಘಟನೆಯನ್ನು ಶಿಬಿರಕ್ಕೆ ಆಗಮಿಸಿದ್ದ ಪ್ರವಾಸಿಗರೊಬ್ಬರು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಾಣಿ ಪ್ರಿಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆನೆಗೆ ಹೊಡೆದ ಮಾವುತ ವಿನಿಲ್ ಕುಮಾರ್ ಮತ್ತು ಅವರ ಸಹಚರ ಶಿವ ಪ್ರಸಾದ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಶಿವಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ನಾಚಿಯಾರ್ ತಿರುಕೋವಿಲ್ ದೇವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೆ ಇಬ್ಬರನ್ನು ಆರೆಸ್ಟ್ ಮಾಡಲಾಗಿದೆ.