LATEST NEWS
ಸಾಸ್ತಾನ ನವಯುಗ ಟೋಲ್ ಗೇಟ್ ವಿರುದ್ದ ಸ್ಥಳೀಯರ ಬೃಹತ್ ಪ್ರತಿಭಟನಾ ಸಭೆ
ಉಡುಪಿ ಫೆಬ್ರವರಿ 22: ಸಾಸ್ತಾನದಲ್ಲಿನ ನವಯುಗ ಟೋಲ್‌ಗೇಟ್‌ನಲ್ಲಿ ಸ್ಥಳೀಯ ವಾಹನಗಳ ಸುಂಕ ವಿನಾಯಿತಿ ರದ್ದು ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯಿಂದ ಇಂದು ಟೋಲ ಫ್ಲಾಜಾ ಮುಂದೆ ಬೃಹತ್ ಪ್ರತಿಭಟನೆ ನಡೆಯುತ್ತಿದೆ.
ಕೇಂದ್ರ ಸರಕಾರ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ ಹಿನ್ನಲೆ ಈ ಹಿಂದೆ ಸ್ಥಳೀಯರಿಗೆ ನೀಡುತ್ತಿದ್ದ ಟೋಲ್ ವಿನಾಯಿತಿಯನ್ನು ತೆಗೆದು ಹಾಕಿದ್ದಾರೆ. ಈ ಹಿನ್ನಲೆ 80ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಇಂದು ಬಂದ್, ಪ್ರತಿಭಟನೆಗೆ ಬೆಂಬಲ ಸೂಚಿಸಿವೆ. ಟೋಲ್ ಗೇಟ್ ಸಮೀಪದಲ್ಲೇ ಪ್ರತಿಭಟನೆ ನಡೆಸಿರುವ ಸಂಘಟನೆಗಳು ಸ್ಥಳೀಯರಿಗೆ ಟೋಲ್ ನಲ್ಲಿ ರಿಯಾಯಿತಿ ನೀಡಬೇಕೆಂದು ಆಗ್ರಹಿಸಿದ್ದಾರೆ.
ಹಿಂದೆ ಸಾರ್ವಜನಿಕರು ಹೋರಾಟ ಮಾಡಿದಾಗ ಕೋಟ ಜಿಪಂ ವ್ಯಾಪ್ತಿಯ ಎಲ್ಲ ವಾಹನಗಳಿಗೆ ಟೋಲ್ ಸುಂಕ ವಿನಾಯಿತಿ ಘೋಷಿಸಲಾಗಿತ್ತು. ಈಗ ಫಾಸ್ಟ್ಯಾಗ್ ನೆಪದಲ್ಲಿ ಈ ಸೌಲಭ್ಯ ಕಿತ್ತುಕೊಂಡಿರುವುದರ ವಿರುದ್ಧ ಪ್ರತಿಭಟನೆ ಆಯೋಜಿಸಲಾಗಿದೆ.
ಈ ಪ್ರತಿಭಟನಾ ಸಭೆಯಲ್ಲಿ ಸಾವಿರದ ಸಂಖ್ಯೆಯಲ್ಲಿ ಸ್ಥಳೀಯರು ಭಾಗವಹಿಸಿದ್ದು, ಪ್ರತಿಭಟನೆಗೆ ಪೂರಕವಾಗಿ ಕೋಟ ಜಿಲ್ಲಾ ಪಂಚಾಯತ್ ಸ್ವಯಂ ಪ್ರೇರಿತ ಬಂದ್ ನಡೆಸಲಾಗಿದೆ.