DAKSHINA KANNADA
ಮಡಿಕೇರಿ ಸಂತ್ರಸ್ತರಿಗೆ ಎಸ್‌ಡಿಪಿಐ ನಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ

ಮಡಿಕೇರಿ ಸಂತ್ರಸ್ತರಿಗೆ ಎಸ್‌ಡಿಪಿಐ ನಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ
ಮಡಿಕೇರಿ,ಸೆಪ್ಟೆಂಬರ್ 23 : ಜಿಲ್ಲೆಯಲ್ಲಿ ಸುರಿದ ರಣ ಭೀಕರ ಮಳೆ ಪರಿಣಾಮ ಪ್ರಕೃತಿ ವಿಕೋಪ ಸಂದರ್ಭದಲ್ಲಿ ನಿರಾಶ್ರಿತರಾಗಿದ್ದ ಮಡಿಕೇರಿ ನಗರದ ವಿವಿಧ ಭಾಗದ 70ಕ್ಕೂ ಹೆಚ್ಚು ಕುಟುಂಬಗಳ 198 ಮಂದಿಗೆ ಎಸ್ ಡಿ ಪಿ ಐ ಪಕ್ಷ ಹರದಯ ಸ್ಪರ್ಶಿ ಬೀಳ್ಕೊಟ್ಟಿತು.
ದಿಕ್ಕು ದೆಸೆ ಇಲ್ಲದೆ ನಿರಾಶ್ರಿತರಾದ ಕುಟುಂಬಳಿಗೆ 37 ದಿನಗಳಿಂದ ಆಹಾರ ಪದಾರ್ಥಗಳೊಂದಿಗೆ ಮೂಲಭೂತ ಸೌಲಭ್ಯಗಳನ್ನು ಪಕ್ಷದ ಕಾರ್ಯಕರ್ತರು ವ್ಯವಸ್ಥೆ ಮಾಡಿಕೊಟ್ಟಿದ್ದರು.

ಸರಕಾರದಿಂದ ನಿವೇಶನ ಲಭಿಸುವವರೆಗೆ ಇದೀಗ ನಗರದ ವಿವಿಧೆಡೆಯ ಬಾಡಿಗೆ ಮನೆಗಳಿಗೆ ಹಾಗೂ ಕುಟುಂಬಸ್ಥರ ಮನೆಗಳಿಗೆ ತೆರಳಿದ್ದಾರೆ. ಇಂದಿನ ಕಾರ್ಯಕ್ರಮದಲ್ಲಿ ನಿರಾಶ್ರಿತರ ಮುಂದಿನ ಒಂದು ತಿಂಗಳಿಗೆ ಬೇಕಾದ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು.
ನಿವೇಶನ ಲಭಿಸುವವರೆಗೆ ಪಕ್ಷದ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಪಕ್ಷದ ಪ್ರಮುಖರು ಧೈರ್ಯ ತುಂಬಿದರು.
ಕಳೆದ ಒಂದು ತಿಂಗಳಿನಿಂದ ಸ್ವಂತ ಮನೆಯವರಂತೆ ಮದರಸದಲ್ಲಿ ಎಲ್ಲಾ ಜನತೆಗೂ ಯಾವುದೇ ಕೊರತೆ ಇಲ್ಲದೆ ಸಹಕಾರ ನೀಡಿದ ಎಸ್ ಡಿ ಪಿ ಐ ಪಕ್ಷದವರಿಗೆ ನಿರಾಶ್ರಿತರು ಅಭಿನಂದನೆ ಸಲ್ಲಿಸಿದರು.
ಆಜಾದ್ ನಗರದ ಅಲ್ ಮಸ್ಜಿದುಲ್ ರಿಫಾಯಿಯ ಕೇಂದ್ರದಲ್ಲಿ ನಿರಾಶ್ರಿತರಾಗಿ ನೋಂದಣಿ ಮಾಡಿದ್ದರು. ಇದರಲ್ಲಿ 39 ಕುಟುಂಬಗಳ ಮನೆಗಳು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ.ನಿರಾಶ್ರಿತ ಕೇಂದ್ರದ ಉಸ್ತುವಾರಿ ವಹಿಸಿದ್ದ ನಗರಸಭಾ ಸದಸ್ಯ ಮನ್ಸೂರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಸಮಿತಿ ಸದಸ್ಯ ಅಮೀನ್ ಮೊಹಿಸಿನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸಿರಿಮನೆ ನಾಗರಾಜ್, ಪಿ ಎಫ್ ಐ ಜಿಲ್ಲಾಧ್ಯಕ್ಷ ಹ್ಯಾರಿಸ್, ನಗರಸಭಾ ಸದಸ್ಯ ಪೀಟರ್, ಬದ್ರಿಯಾ ಜಮಾಅತ್ ಅಧ್ಯಕ್ಷ ಯೂಸುಫ್, ಅಝಾದ್ ನಗರ ಮಸೀದಿಯ ಅಧ್ಯಕ್ಷ ಉಮರ್, ಪ್ರಮುಖರಾದ ಅಶ್ರಫ್, ಬಾಬ್ ಜಾನ್ ಉಸ್ತಾದ್, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಅನೇಕರು ಇದ್ದರು.