BANTWAL
ಬಂಟ್ವಾಳ – ಹೃದಯಾಘಾತದಿಂದ ಹಾಸ್ಯ ಕಲಾವಿದ ಮೌನೇಶ್ ಆಚಾರ್ಯ ನಿಧನ

ಬಂಟ್ವಾಳ ಜುಲೈ 15: ನಾಟಕಗಳಲ್ಲಿ ಹಾಸ್ಯ ಕಲಾವಿದರಾಗಿ ಗುರುತಿಸಿಕೊಂಡಿರುವ ಮೌನೇಶ್ ಆಚಾರ್ಯ ಮಾಣಿ ಕಾಪಿಕಾಡು(42) ಹೃದಯಾಘಾತದಿಂದ ನಿಧನರಾಗಿದ್ದಾರೆ.
ನೆಲ್ಯಾಡಿಯ ‘ನಮ್ಮ ಕಲಾವಿದರು’ ತಂಡದಲ್ಲಿ ಕಲಾವಿದನಾಗಿ ಹಾಸ್ಯ, ಪೋಷಕ ಪಾತ್ರದಲ್ಲಿ ಗುರುತಿಸಿಕೊಂಡಿರುವವರು. ಸಾಮಾಜಿಕ ಜಾಲತಾಣಗಳಲ್ಲೂ ಇವರ ಹಾಸ್ಯ ಅಭಿನಯ ಪ್ರಖ್ಯಾತಿಯನ್ನು ಪಡೆದಿದೆ. ಮೃತರು ಪತ್ನಿ, ಮಗು, ತಾಯಿ ಹಾಗೂ ತಮ್ಮನನ್ನು ಅಗಲಿದ್ದಾರೆ. ಮೃತರಿಗೆ ಹಲವಾರು ಕಲಾವಿದರು ಹಾಗೂ ಗಣ್ಯರು ಸಂತಾಪ ಸೂಚಿಸಿದ್ದಾರೆ
