KARNATAKA
ಆರತಕ್ಷತೆ ವೇಳೆ ಹೃದಯಾಘಾತಕ್ಕೆ ಬಲಿಯಾದ ವರ…!!

ಬಳ್ಳಾರಿ ಜುಲೈ 21: ಮದುವೆಯ ಆರತಕ್ಷತೆ ವೇಳೆ ಹೃದಯಾಘಾತಕ್ಕೆ ವರ ಸಾವನಪ್ಪಿರುವ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಲಿನ ಪಾಪಿನಾಯಕನ ಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಹೊನ್ನೂರ ಸ್ವಾಮಿ ಎಂದು ಗುರುತಿಸಲಾಗಿದೆ. ಬುಧವಾರ ಗ್ರಾಮದ ಸುಡುಗಾಡಪ್ಪನ ದೇವಸ್ಥಾನದಲ್ಲಿ ಹೊನ್ನೂರಸ್ವಾಮಿ ವಿವಾಹವಾಗಿದ್ದರು. ನಂತರ ನಡೆದ ಆರತಕ್ಷತೆ ವೇಳೆ ಹೊನ್ನೂರ ಸ್ವಾಮಿ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ವೇದಿಕೆಯಲ್ಲೇ ನೋವಿನಿಂದ ಒದ್ದಾಡಿದ ಅವರನ್ನು ಸ್ಥಳೀಯ ವೈದ್ಯರ ಬಳಿಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅದಾಗಲೇ ಹೊನ್ನೂರ ಸ್ವಾಮಿಗೆ ಲೋ ಬಿಪಿಯಾಗಿದ್ದು, ಎಚ್ಚರ ತಪ್ಪಿದ್ದಾರೆ. ಅವರನ್ನು ಪರೀಕ್ಷೆ ಮಾಡಿದ ವೈದ್ಯರು ಹೊಸಪೇಟೆಯಲ್ಲಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಸಲಹೆ ನೀಡಿದ್ದಾರೆ. ಆದರೆ ಅಲ್ಲಿಗೆ ಹೋಗುವಷ್ಟರಲ್ಲಿ ಹೊನ್ನೂರ ಸ್ವಾಮಿ ಅವರ ಪ್ರಾಣಪಕ್ಷಿ ಹಾರಿಹೋಗಿದೆ.

ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಇದೀಗ ಸೂತಕದ ಛಾಯೆ ಬಡಿದಿದೆ.ನವದಂಪತಿಗಳು ತಮ್ಮ ಮುಂದಿನ ಭವಿಷ್ಯದ ಬಗ್ಗೆ ತಮ್ಮದೇ ಆದ ಕನಸ್ಸು ಕಟ್ಟಿಕೊಂಡಿದ್ದರು. ಆದರೆ ಇವರ ಕನಸು ಏಕೋ ಜವರಾಯನಿಗೆ ಇಷ್ಟವಾಗಲಿಲ್ಲ ಅನಿಸುತ್ತದೆ. ಮದುವೆಯ ಆರತಕ್ಷತೆ ದಿನವೇ ವರ ಮರಣ ಹೊಂದಿದ್ದು ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ.