BELTHANGADI
ಹೆಂಡತಿಗೆ ಹೃದಯಾಘಾತ ಗಂಡನ ಸಾವು
ಹೆಂಡತಿಗೆ ಹೃದಯಾಘಾತ ಗಂಡನ ಸಾವು
ಮಂಗಳೂರು ಎಪ್ರಿಲ್ 6: ಹೃದಯಾಘಾತವಾಗಿದ್ದ ಪತ್ನಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಪತಿಗೆ ಹೃದಯಾಘಾತವಾಗಿ ಸಾವನಪ್ಪಿದ ಘಟನೆ ನಡೆದಿದೆ.
ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಣೆಜಾಲು ಎಂಬಲ್ಲಿ ಈ ಘಟನೆ ನಡೆದಿದೆ. ಗೆಳೆಯ ಗೌಡ ಎಂಬವರ ಪತ್ನಿ ಪುಷ್ಪಾ ಅವರಿಗೆ ಹೃದಯಾಘಾತವಾಗಿತ್ತು. ಈ ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಗೆ ಸೇರಿಸಲು ವಾಹನದಲ್ಲಿ ಸಾಗಿಸುವ ದಾರಿ ಮಧ್ಯೆ ಗೆಳೆಯ ಗೌಡ ಅವರಿಗೆ ಹೃದಯಾಘಾತವಾಗಿದೆ. ತೀವ್ರ ಹೃದಯಾಘಾತವಾದ ಹಿನ್ನಲೆಯಲ್ಲಿ ಗೆಳೆಯ ಗೌಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗೆಳೆಯ ಗೌಡ ಅವರ ಪತ್ನಿ ಪುಷ್ಟ ಅವರು ಪ್ರಾಯಣಾಪಯದಿಂದ ಪಾರಾಗಿದ್ದಾರೆ. ವಿದಿಯಾಟದಲ್ಲಿ ತಮ್ಮ ಪತಿಯನ್ನು ಕಳೆದುಕೊಂಡಿದ್ದಾರೆ.