LATEST NEWS
ಮನೆ ದರೋಡೆಗೆ ಹೊಂಚು ಹಾಕಿದ್ದ ಐವರು ದರೋಡೆಕೋರರ ಸೆರೆ
ಮನೆ ದರೋಡೆಗೆ ಹೊಂಚು ಹಾಕಿದ್ದ ಐವರು ದರೋಡೆಕೋರರ ಸೆರೆ
ಪುತ್ತೂರು ಎಪ್ರಿಲ್ 6: ಶ್ರೀಮಂತರ ಮನೆ ದರೋಡೆ ಮಾಡುವ ಉದ್ದೇಶ ಹೊಂದಿದ್ದ ಐವರು ದರೋಡೆಕೋರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜಿಲ್ಲೆಯಲ್ಲಿ ನಡೆಯಲಿದ್ದ ದರೋಡೆ ಪ್ರಕರಣವನ್ನು ತಪ್ಪಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಡಿಸಿಐಬಿ ಪೊಲೀಸ್ ನಿರೀಕ್ಷಕರಾದ ಸುನಿಲ್. ವೈ. ನಾಯ್ಕ್. ರವರು ತಮ್ಮ ಸಿಬ್ಬಂದಿಗಳೊಂದಿಗೆ ರಾತ್ರಿ ರೌಂಡ್ಸ್ ಕರ್ತವ್ಯ ದಲ್ಲಿ ಮಾಣಿ, ಪುತ್ತೂರು, ಕುಂಬ್ರ ಕಡೆ ಸಂಚರಿಸಿ ಕೊಲ್ಲಾಜೆ ಬಸ್ ನಿಲ್ದಾಣದ ಬಳಿ ತಲುಪಿದಾಗ ಐದು ಜನರು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದರು. ಇವರನ್ನು ವಿಚಾರಿಸಿದಾಗಿ ಎಲ್ಲರೂ ಬಿಹಾರದವರಾಗಿದ್ದು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು.
ನಂತರ ಅವರನ್ನು ಕೂಲಂಕುಷವಾಗಿ ವಿಚಾರಿಸಿದಾಗಿ ಸದರಿ ಆರೋಪಿಗಳು ಶ್ರೀಮಂತರ ಮನೆಗಳನ್ನು ಗುರುತಿಸಿ ದರೋಡೆ ಮಾಡುವ ಉದ್ದೇಶ ಹೊಂದಿದ್ದರು. ದರೋಡೆ ಮಾಡಲು ಆರೋಪಿಗಳು ಚೂರಿ,ಕಬ್ಬಿಣದ ರಾಡ್,ಉಳಿ,ಸುತ್ತಿಗೆ,ಮೆಣಸಿನ ಹುಡಿ ಪ್ಯಾಕೆಟ್, ಹ್ಯಾಂಡ್ ಗ್ಲೌಸ್ , ಮತ್ತು ಪ್ಲಾಸ್ಟರ್ ನ್ನು ಹಿಡಿದುಕೊಂಡಿದ್ದರು.
ಬಂಧಿತರ ಆರೋಪಿಗಳನ್ನು ಪ್ರಮೋದ್ ಶರ್ಮ, ಅಂಕುಶ್ ರಾಜ್, ಟುನ್ ಟುನ್ ಕುಮಾರ್, ಕರಣ್ ಕುಮಾರ್, ಪ್ರಿನ್ಸ್ ಕುಮಾರ್ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಮುಂದಿನ ತನಿಖೆಗಾಗಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
You must be logged in to post a comment Login