KARNATAKA
ಪ್ರಿಯಕರ ನೇಣಿಗೆ ಶರಣಾದ ಸುದ್ದಿ ಕೇಳಿ ಪ್ರಿಯತಮೆಯೂ ಆತ್ಮಹತ್ಯೆ

ಬೀದರ್, ಆಗಸ್ಟ್ 10: ಪ್ರೀತಿಗೆ ವಿರುದ್ಧವಾಗಿ ಮದುವೆ ಮಾಡಲು ಮುಂದಾಗಿದ್ದರಿಂದ ಮನನೊಂದ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿಕೊಂಡಿರುವ ದಾರುಣ ಘಟನೆ ಬೀದರ್ ನಲ್ಲಿ ನಡೆದಿದೆ.
ನಗರದ ಲಾಡಗೇರಿ ಬಡಾವಣೆಯ ಶರತ್ (28) ಹಾಗೂ ಸಂಗೀತಾ (26) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು.ಹಲವು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಸಂಗೀತಾಗೆ ಬೇರೊಂದು ಹುಡುಗನ ಜೊತೆ ನಿಶ್ಚಿತಾರ್ಥ ನಡೆದಿತ್ತು. ಈ ವಿಷಯ ತಿಳಿದ ಶರತ್ ಮೊದಲು ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪ್ರಿಯಕರ ಶರತ್ ಸಾವಿನ ಸುದ್ದಿ ಕೇಳಿದ ಸಂಗೀತಾ ಬಾವಿಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಕುರಿತು ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.