LATEST NEWS
ತುರ್ತು ವೈದ್ಯಕೀಯ ನೆರವಿಗೆ ದಿವಾಳಿಯಾಗಿರುವ ಶ್ರೀಲಂಕಾಕ್ಕೆ ಪತ್ರ ಬರೆದ ನಿತ್ಯಾನಂದ

ಕೊಲಂಬೊ ಸೆಪ್ಟೆಂಬರ್ 03: ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರದಲ್ಲಿ ಆರೋಪಿಯಾಗಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಇದೀಗ ಚಿಕಿತ್ಸೆಗಾಗಿ ತುರ್ತು ವೈದ್ಯಕೀಯ ನೆರವಿನ ಅವಶ್ಯಕತೆ ನೀಡಿ ಎಂದು ದಿವಾಳಿ ಅಂಚಿನಲ್ಲಿರುವ ದ್ವೀಪ ರಾಷ್ಟ್ರ ಶ್ರೀಲಂಕಾದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
ದೇಶವನ್ನೇ ತೊರೆದು ಈಕ್ವೆಡಾರ್ ದ್ವೀಪದಲ್ಲಿ ನೆಲೆಸಿರುವ ಬಿಡದಿ ಧ್ಯಾನಪೀಠದ ಸ್ವಾಮಿ ನಿತ್ಯಾನಂದನ ಆರೋಗ್ಯ ಕ್ಷೀಣಿಸುತ್ತಿದೆಯಂತೆ ಅಲ್ಲದೆ ಆ ದ್ವೀಪ ರಾಷ್ಟ್ರದಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆಯು ಇದೆಯಂತೆ ಹಾಗಾಗಿ ನನ್ನ ಜೀವಕ್ಕೆ ಅಪಾಯವಿದೆ, ತುರ್ತು ಚಿಕಿತ್ಸೆಗಾಗಿ ಕೂಡಲೇ ವೈದ್ಯಕೀಯ ಅಗತ್ಯತೆಗಳನ್ನು ಪೂರೈಸುವಂತೆ ಲಂಕಾ ಅಧ್ಯಕ್ಷ ರನಿಲ್ ವಿಕ್ರಮ ಸಿಂಘೆ ಅವರಿಗೆ ಪತ್ರ ಬರೆದಿದ್ದಾರೆ.

ಅತ್ಯಾಚಾರದ ಆರೋಪ ಎದುರಿಸುತ್ತಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಶ್ರೀಲಂಕಾದಲ್ಲಿ ರಾಜಕೀಯ ಆಶ್ರಯ ಬಯಸುತ್ತಿದ್ದಾರೆ ಎಂದು ವರದಿಯಾಗಿದೆ. ತನ್ನ ಆರೋಗ್ಯ ಕ್ಷೀಣಿಸುತ್ತಿರುವುದನ್ನು ಉಲ್ಲೇಖಿಸಿ ನಿತ್ಯಾನಂದ ಆಗಸ್ಟ್ 7ರಂದು ದ್ವೀಪ ರಾಷ್ಟ್ರದ ಅಧ್ಯಕ್ಷರಿಗೆ ಪತ್ರ ಬರೆದಿದ್ದು, ತನಗೆ ವೈದ್ಯಕೀಯ ಆರೈಕೆಯ ‘ತುರ್ತು’ ಅಗತ್ಯವಿದೆ ಎಂದು ಹೇಳಿಕೊಂಡಿದ್ದಾರೆ.
ತನಗೆ ಜೀವ ಬೆದರಿಕೆ ಇದ್ದು, ಶ್ರೀಲಂಕಾದಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ನೀಡುವಂತೆ ನಿತ್ಯಾನಂದ ಶ್ರೀಲಂಕಾ ಪ್ರಧಾನಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಈ ಪತ್ರದಲ್ಲಿ ನಿತ್ಯಾನಂದ ಸ್ಥಾಪಿಸಿರುವ ದ್ವೀಪರಾಷ್ಟ್ರ ‘ಶ್ರೀಕೈಲಾಸ’ದಲ್ಲಿನ ವೈದ್ಯಕೀಯ ಮೂಲಸೌಕರ್ಯಗಳ ಕೊರತೆಯನ್ನು ಉಲ್ಲೇಖಿಸಲಾಗಿದೆ.