Connect with us

FILM

ಅಪ್ಪುವಿನ ತದ್ರೂಪಿ ಯುವಕ ಈತ- ತಕ್ಷಣಕ್ಕೆ ನೋಡಿದರೆ ಥೇಟ್ ಪುನೀತ್ ರಾಜ್ ಕುಮಾರ್!

ಕುಂದಾಪುರ, ನವೆಂಬರ್ 4: ಕನ್ನಡ ಚಿತ್ರರಂಗದಲ್ಲಿ ಜೂನಿಯರ್ ರಾಜ್ ಕುಮಾರ್, ಜೂನಿಯರ್ ವಿಷ್ಣುವರ್ಧನ್, ಜೂನಿಯರ್ ಶಂಕರ್ನಾಗ್, ಜೂನಿಯರ್ ಅಂಬರೀಷ್, ಜೂನಿಯರ್ ಉಪೇಂದ್ರ..ಹೀಗೆ ಸ್ಯಾಂಡಲ್ ವುಡ್ ದೊಡ್ಡದೊಡ್ಡ ನಟರನ್ನೇ ಹೋಲುವಂಥ, ತಕ್ಷಣಕ್ಕೆ ನೋಡಿದರೆ ಅವರೇ ಅನಿಸುವಂಥವರಿದ್ದಾರೆ.

ಅದೇ ರೀತಿ ಪುನೀತ್ ರಾಜ್ ಕುಮಾರ್ ರನ್ನು ಹೋಲುವ  ಯುವಕನೊಬ್ಬ ಈಗ ಜನರ ಗಮನ ಸೆಳೆಯಲಾರಂಭಿಸಿದ್ದಾನೆ. ಹೌದು.. ಈಗ ಎಲ್ಲೆಡೆ ಪುನೀತ್ ರಾಜಕುಮಾರ್ ಅವರ ವಿಚಾರವೇ ಚರ್ಚೆಯಲ್ಲಿ ಇರುವ ಈ ಸಂದರ್ಭದಲ್ಲಿ ಇಲ್ಲೊಬ್ಬ ಜೂನಿಯರ್ ಪುನೀತ್ ರಾಜಕುಮಾರ್ ಎಂದೇ ಗುರುತಿಸಿಕೊಳ್ಳುತ್ತಿರುವ ಯುವಕನೊಬ್ಬ ಜನರ ಗಮನವನ್ನು ಸೆಳೆಯುತ್ತಿದ್ದಾನೆ. ಮೂಲತಃ ತೀರ್ಥಹಳ್ಳಿಯ ನಿವಾಸಿ ಆಗಿರುವ ಈತನ ಹೆಸರು ಪ್ರವೀಣ್ ಆಚಾರ್ಯ.

ಸದ್ಯ ಈತ ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ಗ್ಯಾರೇಜ್ ನಡೆಸುತ್ತಿದ್ದಾನೆ. ನೋಡಲು ಪುನೀತ್ ಥರವೇ ಕಾಣುವ ಈತ ಪುನೀತ್ ಥರವೇ ಉಡುಗೆ-ತೊಡುಗೆ ತೊಟ್ಟು ಕಾಣಿಸಿಕೊಳ್ಳುತ್ತಾನೆ. ಮಾತ್ರವಲ್ಲ ಪುನೀತ್ ಧ್ವನಿಯನ್ನು ಅನುಕರಿಸಿ ಮಾತನಾಡುವುದನ್ನೂ ಅಭ್ಯಾಸ ಮಾಡಿಕೊಂಡಿರುವ ಈತ ಕುಂದಾಪುರ ಪರಿಸರದಲ್ಲಿ ಜೂನಿಯರ್ ಪುನೀತ್ ರಾಜಕುಮಾರ್ ಎಂದೇ ಗುರುತಿಸಿಕೊಳ್ಳುತ್ತಿದ್ದಾನೆ. ಪುನೀತ್ ಅಭಿಮಾನಿಯಾಗಿರುವ ಈತ ಅಪ್ಪು ಅಗಲಿಕೆಯಿಂದ ಸದ್ಯ ನೊಂದುಕೊಂಡಿದ್ದಾನೆ.

Video:

Share Information
Continue Reading
Advertisement
Click to comment

Leave a Reply

Your email address will not be published. Required fields are marked *