Connect with us

KARNATAKA

ಹಾವಿನ ದ್ವೇಷ 12 ವರುಷ,ಕೀಟಲೆ ಕೊಟ್ಟ ಯುವಕನನ್ನು ಕಚ್ಚಿ ಸಾಯಿಸಿದ ನಾಗರಹಾವು..!

ಹಾಸನ: ಹಾವಿನ ದ್ವೇಷ 12 ವರುಷ ಎಂಬ ನಾನ್ನುಡಿನಿಜವೋ ಸುಳ್ಳೋ ಗೊತ್ತಿಲ್ಲ. ಹಾಸನದ ಹೊಳೆನರಸೀಪುರದ ದೇವರ ಗುಡ್ಡೆಯಲ್ಲಿ ಈ ವಿದ್ಯಮಾನ ಇದು ನಿಜವಾಗ್ಲೂ ಹೌದು ಎನ್ನವಂತಿದೆ. ಹಾವಿಗೆ ಪದೇ ಪದೆ ತೊಂದರೆ ಕೊಟ್ಟು ಅದನ್ನು ವಿಡಿಯೊ ಮಾಡಿಕೊಂಡಿದ್ದ ಯುವಕ ಹಾವು ಕಚ್ಚಿ ಸಾವನ್ನಪ್ಪಿದ್ದಾನೆ.

ಹಾವಿಗೆ ತೊಂದರೆ ಕೊಟ್ಟಿದ್ದಕ್ಕೆ ಜ್ಞಾಪಕವಿಟ್ಟುಕೊಂಡು ಬಂದ ಹಾವು ಸೇಡು ತೀರಿಸಿಕೊಳ್ಳಲು ಕಚ್ಚಿರಬಹುದು ಎಂದು ಗ್ರಾಮಸ್ಥರು ಆಡಿಕೊಳ್ಳುತ್ತಿದ್ದಾರೆ.
ಅಕ್ಟೋಬರ್ 29ರ ಸಂಜೆ ಹಾವು ಕಡಿತದಿಂದ ಯುವಕ ಅಭಿಲಾಷ್‌ ಸಾವನ್ನಪ್ಪಿದ್ದ, ಈತ ಹಾವು ಕಚ್ಚಿ ತೀರಿ ಹೋದ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಈತನ ಮೊಬೈಲ್‌ ಅನ್ನು ಎರಡು ದಿನಗಳ ಬಳಿಕ ಪರಿಶೀಲನೆ ನಡೆಸಿದಾಗ ಅಲ್ಲೊಂದು ವಿಡಿಯೊ ಸಿಕ್ಕಿದ್ದು ಇದು ಎಲ್ಲರನ್ನೂ ಭಯಗೊಳಿಸುವಂತೆ ಮಾಡಿದೆ. ಕಾರಣ ಆ ವಿಡಿಯೊದಲ್ಲಿ ಅಭಿಲಾಷ್‌ ಅವರು ಅವರದ್ದೇ ತೋಟದಲ್ಲಿ ನಾಗರಹಾವೊಂದಕ್ಕೆ ಭಾರಿ ತೊಂದರೆ ಕೊಟ್ಟಿರುವುದು ಸೆರೆಯಾಗಿದೆ.ಎಂದಿನಂತೆ ತೋಟದ ಕಡೆ ಹೋಗಿದ್ದ ಅಭಿಲಾಷ್‌ಗೆ ಚಿಕ್ಕ ಕಾಲುವೆಯೊಂದರಲ್ಲಿ ನಾಗರ ಹಾವೊಂದು ಕಾಣಿಸಿಕೊಂಡಿದೆ.

ಹಾವಿಗೆ ಬಲಿಯಾದ ಅಭಿಲಾಶ್

ಅಲ್ಲಿ ನೀರಿನ ನಡುವೆ ಹಾವೊಂದು ಹೆಡೆ ಎತ್ತಿ ಕುಳಿತಿತ್ತು. ಇದನ್ನು ನೋಡಿದ ಅಭಿಲಾಷ್‌ ತನ್ನ ಮೊಬೈಲ್‌ ಕ್ಯಾಮೆರಾವನ್ನು ಆನ್‌ ಮಾಡಿದ್ದು, ಬಳಿಕ ಒಂದು ಪೈಪ್‌ ಅನ್ನು ತೆಗೆದುಕೊಂಡು ಹಾವಿನತ್ತ ತೆಗೆದುಕೊಂಡು ಹೋಗಿದ್ದಾನೆ. ಅಲ್ಲಿ ಹಾವಿನ ಮುಖದ ಹತ್ತಿರಕ್ಕೆ ಪೈಪ್‌ ತೆಗೆದುಕೊಂಡು ಹೋಗಿದ್ದಾನೆ. ಅದಕ್ಕೆ ಸಿಟ್ಟಾಗುತ್ತಿದ್ದ ಹಾವು ಆ ಪೈಪ್‌ಗೆ ಹಾಗೂ ನೆಲಕ್ಕೆ ಕುಕ್ಕುತ್ತಿತ್ತು. ಹೀಗೆ ಕೆಲ ಕಾಲ ಮಾಡಿದ್ದಾನೆ. ಬಳಿಕ ಆ ನಾಗರ ಹಾವು ಅಲ್ಲಿಂದ ಹೋಗಿದೆ. ಇದಾಗಿ ಕೆಲವೇ ದಿನಗಳ ನಂತರ ಅಭಿಲಾಷ್‌ ಹಾವು ಕಡಿತದಿಂದ ಮೃತಪಟ್ಟಿದ್ದಾನೆ. ಆದರೆ ಈಗ ಅಭಿಲಾಷ್‌ಗೆ ಅದೇ ಹಾವು ಬಂದು ಕಡಿದಿದೆಯೇ ಎಂಬ ಬಗ್ಗೆ ಯಾವುದೇ ನಿಖರತೆ ಇಲ್ಲ. ಜತೆಗೆ ಯಾರಿಗೂ ಈ ಬಗ್ಗೆ ಗೊತ್ತಿಲ್ಲ. ಆದರೆ, ಜನರು ಮಾತ್ರ ಈಗ ಹಾವಿಗೆ ಕಾಟ ಕೊಟ್ಟಿದ್ದಕ್ಕೇ ಅದು ಬಂದು ಕಚ್ಚಿರಬಹುದು. ಹಾವಿನ ದ್ವೇಷ ಎಂದರೆ ಸುಮ್ಮನೆಯೇ? ಎಂದು ಸಹ ಚರ್ಚೆ ಮಾಡುತ್ತಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *