Connect with us

LATEST NEWS

ಹುಸೇನಬ್ಬ ಕೊಲೆ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆ

ಹುಸೇನಬ್ಬ ಕೊಲೆ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆ

ಉಡುಪಿ ಜೂನ್ 5: ಉಡುಪಿಯ ಹಿರಿಯಡ್ಕ ಪೋಲೀಸ್ ಠಾಣಾ ವ್ಯಾಪ್ತಿಯ ಕಾಫಿ ತೋಟದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ದನದ ವ್ಯಾಪಾರಿ ಹುಸೇನಬ್ಬ ಸಾವಿನ ಬಳಿಕ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರದ ಕುರಿತಂತೆ ಪರ-ವಿರೋಧ ಅಭಿಪ್ರಾಯಗಳು ಕೇಳಿ ಬರಲಾರಂಭಿಸಿದೆ.

ಕೆಲವು ಸಂಘಟನೆಗಳು ಈ ಸಾವನ್ನು ಸಮರ್ಥಿಸಿಕೊಂಡರೆ, ಇನ್ನು ಕೆಲವು ಸಂಘಟನೆಗಳು ಇದರ ವಿರುದ್ಧ ದ್ವನಿಯೆತ್ತುತ್ತಿವೆ. ರಾತ್ರಿ ಸಮಯದಲ್ಲಿ ದನಗಳನ್ನು ಸಾಗಿಸುವ ವೃತ್ತಿಯಲ್ಲಿ ತೊಡಗಿದ್ದ ಮಂಗಳೂರಿನ ಜೋಕಟ್ಟೆಯ ನಿವಾಸಿ ಹುಸೇನಬ್ಬ (62) ಮೇ 30 ರಂದು ಉಡುಪಿಯ ಹಿರಿಯಡ್ಕ ಪೋಲೀಸ್ ಠಾಣಾ ವ್ಯಾಪ್ತಿಯ ಕಾಫಿ ತೋಟವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದರು.

ಘಟನೆಗೆ ಸಂಬಂಧಿಸಿದಂತೆ ನಡೆದ ಉನ್ನತ ಮಟ್ಟದ ತನಿಖೆಯಲ್ಲಿ ಹಿರಿಯಡ್ಕ ಠಾಣೆಯ ಎಸ್.ಐ ಸೇರಿದಂತೆ ಹಿಂದೂ ಸಂಘಟನೆಗಳಿಗೆ ಸೇರಿದ ಹಲವರನ್ನು ಪೋಲೀಸರು ಬಂಧಿಸಿ, ಅವರ ಮೇಲೆ ಕೊಲೆ ಪ್ರಕರಣವನ್ನು ದಾಖಲಿಸಿದ್ದರು. ಈ ಘಟನೆಯ ಬಳಿಕದ ಬೆಳವಣಿಗೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಇದೇ ವಿಚಾರವನ್ನಿಟ್ಟುಕೊಂಡು ದ್ವೇಷ ಹಚ್ಚುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ. ಟಿಪ್ಪು ಸುಲ್ತಾನ್ ಯುವಸೇನೆ ಎನ್ನುವ ಹೆಸರಿನಲ್ಲಿ ಪೋಸ್ಟೊಂದು ಇದೀಗ ವಾಟ್ಸಪ್ , ಫೇಸ್ಬುಕ್ ಗಳಲ್ಲಿ ಹರಿದಾಡುತ್ತಿದೆ.

ಸಾವಿರ ಕೋಟಿ ಮೌಲ್ಯದ ದನದ ಮಾಂಸ ವಿದೇಶಕ್ಕೆ ರಫ್ತು ಮಾಡುವ ಗೋ ಮಾತೆಯ ಮಕ್ಕಳು ಭಾರತದಲ್ಲಿ ದನದ ವ್ಯಾಪಾರ ನಿಮ್ಮ ಅಪ್ಪಂದಿರು ಮಾತ್ರ ಮಾಡಬೇಕೆ ? ಜಾನುವಾರು ವ್ಯಾಪಾರಿಗಳೇ , ಆಯುಧದೊಂದಿಗೆ ವ್ಯಾಪಾರ ಮಾಡಿ, ಇಲ್ಲವೇ ದನದ ವ್ಯಾಪಾರ ಬಿಟ್ಟುಬಿಡಿ. ದನದ ಹೆಸರಿನಲ್ಲಿ ಕೊಲೆಯಾದವರಲ್ಲಿ ಹಸೈನಬ್ಬ ಕೊನೆಯವರಾಗಲಿ ಎನ್ನುವ ವಿಷಯವನ್ನು ಇದರಲ್ಲಿ ಬರೆಯಲಾಗಿದೆ.
ಈ ರೀತಿಯ ಪೋಸ್ಟ್ ಗಳು ಇದೀಗ ವೈರಲ್ ಆಗುತ್ತಿದ್ದು, ಇದು ಮತ್ತೊಂದು ಅನಾಹುತಕ್ಕೆ ಎಡೆ ಮಾಡಿಕೊಡುವುದಕ್ಕೆ ಮೊದಲು ಇಂಥ ಮೆಸೇಜ್ ಸೃಷ್ಟಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *