Connect with us

KARNATAKA

ಹೊಸ ವರ್ಷ ಆಚರಿಸಲು ಗೆಳೆಯನನ್ನು ಮನೆಗೆ ಕರಿಸಿ ಕೊಲೆಯಾದ ಮಹಿಳೆ -ಹಾಸನ ತಾಯಿ ಮಕ್ಕಳ ಕೊಲೆಯ ಅಸಲಿ ಕಹಾನಿ

ಹಾಸನ, ಜನವರಿ 07: ಹೊಸವರ್ಷದ ಆರಂಭದಲ್ಲೇ ಹಾಸನದಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳು ನಿಗೂಢ ರೀತಿಯಲ್ಲಿ ಸಾವನಪ್ಪಿದ್ದರು. ಇದೀಗ ಮೂವರ ಸಾವಿಗೆ ಕಾರಣ ತಿಳಿದು ಬಂದಿದ್ದು. ಪತಿ ಮನೆಯಲ್ಲಿ ಇಲ್ಲದಿದ್ದಾಗ ಮನೆಗೆ ಬಂದಿದ್ದ ಮಹಿಳೆಯ ಸ್ನೇಹಿತ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಎಂಬ ಭಯಾನಕ ಸತ್ಯ ಬಯಲಾಗಿದೆ.


ಕೊಲೆ ಮಾಡಿದವನ್ನು ವಿಜಯಪುರ ಮೂಲದ ನಿಂಗಪ್ಪ ಕಾಗವಾಡ ಎಂಬ ವ್ಯಕ್ತಿ ಹಣಕ್ಕಾಗಿ ಶಿವಮ್ಮನನ್ನು ಪೀಡಿಸಿ ಆಕೆ ಹಣ ನೀಡಲು ನಿರಾಕರಿಸಿದಾಗ ಶಿವಮ್ಮ, ಮಕ್ಕಳಾದ ಪವನ್(10), ಸಿಂಚನಾ(8) ಹತ್ಯೆ ಮಾಡಿ ಪರಾರಿಯಾಗಿದ್ದ. ಸದ್ಯ ಆರೋಪಿಯನ್ನು ಪೆನ್ಷನ್‌ ಮೊಹಲ್ಲಾ ಪೊಲೀಸರು ಬಂಧಿಸಿದ್ದಾರೆ. ಮೃತ ಶಿವಮ್ಮ ಪತಿ ತೀರ್ಥಪ್ರಸಾದ್ ಅವರು ಬಿಜಾಪುರದಲ್ಲಿ ಬೇಕರಿ ಇಟ್ಟಿದ್ದರು. ಈ ವೇಳೆ ಬಿಜಾಪುರ ಮೂಲದ ನಿಂಗಪ್ಪ ಕಾಗವಾಡ ಹಾಗೂ ಶಿವಮ್ಮನ ಸ್ನೇಹ ಬೇಳೆದಿತ್ತು.

 

ಬಿಜಾಪುರದಲ್ಲಿ ಬೇಕರಿ ಲಾಸ್ ಆಗಿದ್ದರಿಂದ ಮುಚ್ಚಿ ವಾಪಸ್ ಬಂದು ತುಮಕೂರಿನ ಬೇಕರಿಯಲ್ಲಿ ಶಿವಮ್ಮ ಪತಿ ತೀರ್ಥ ಕೆಲಸ ಮಾಡುತ್ತಿದ್ದರು. ದೂರವಿದ್ದ ಗಂಡನಿಗೆ ಮರೆಮಾಚಿ ಗೆಳೆಯ ನಿಂಗಪ್ಪನ ಜೊತೆ ಶಿವಮ್ಮ ಸಲುಗೆಯಿಂದಿದ್ದರು. ಕಾರು ಚಾಲಕ ಎಂದು ತನ್ನ ಪತಿಗೆ ಗೆಳೆಯನ ಪರಿಚಯ ಮಾಡಿಕೊಟಿದ್ದರು. ಹೊಸ ವರ್ಷದಂದು ಗಂಡ ಬೇಕರಿ ಕೆಲಸಕ್ಕೆ ಆಚೆ ಹೋಗಿದ್ದಾನೆಂದು ಹೊಸ ವರ್ಷಾಚರಣೆಗೆ ಶಿವಮ್ಮ ತನ್ನ ಸ್ನೇಹಿತನನ್ನು ಮನೆಗೆ ಕರೆಸಿಕೊಂಡಿದ್ದರು. ಈ ವೇಳೆ ಮೃತ ಶಿವಮ್ಮ ಹಾಗೂ ಆರೋಪಿ ನಡುವೆ ಹಣಕ್ಕೆ ಜಗಳವಾಗಿದೆ. ಆರೋಪಿ ಹಣ ನೀಡುವಂತೆ ಪೀಡಿಸಿದ್ದಾನೆ. ನಿರಾಕರಿಸಿದಕ್ಕೆ ಕತ್ತು ಹಿಸುಕಿ ಶಿವಮ್ಮ ಕೊಲೆ ಮಾಡಿದ್ದಾನೆ. ಬಳಿಕ ಮಕ್ಕಳಾದ ಸಿಂಚನಾ, ಪವನ್ ಹತ್ಯೆ ಮಾಡಿ ಅಡುಗೆ ಸಿಲಿಂಡರ್ ಪೈಪ್ ತೆಗೆದು ಶಿವಮ್ಮನ ಮೊಬೈಲ್, ತಾಳಿ ಸರದೊಂದಿಗೆ ಎಸ್ಕೇಪ್ ಆಗಿದ್ದಾನೆ. ಮರು ದಿನ ಶಿವಮ್ಮ ಪತಿ ಮನೆಗೆ ಬಂದಾಗ ತಾಯಿ-ಮಕ್ಕಳ ಶವ ಕಂಡು ಶಾಕ್ ಆಗಿದ್ದಾರೆ. ಸದ್ಯ ಕೊಲೆ ಆರೋಪಿ ಅರೆಸ್ಟ್ ಆಗಿದ್ದು ಜೈಲು ಸೇರಿದ್ದಾನೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *