Connect with us

    LATEST NEWS

    ಹರ್ಲೀನ್ ಡಿಯೋಲ್ ಅವರ ಅದ್ಬುತ್ ಕ್ಯಾಚ್ ಗೆ ಫೀದಾ ಆದ ಜನ

    ನಾರ್ತಂಪ್ಟನ್: ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ನ ಮೊದಲ ಟಿ20 ಪಂದ್ಯದಲ್ಲಿ ಭಾರತದ ಹರ್ಲೀನ್ ಡಿಯೋಲ್ ಅವರು ಹಿಡಿದ ಕ್ಯಾತ್ ಇದೀಗ ಇಡೀ ಕ್ರಿಕೇಟ್ ಜಗತ್ತನ್ನೆ ಬೆರುಗುಗೊಳಿಸಿದ್ದು, ಹರ್ಲೀನ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.


    ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತೀಯ ಮಹಿಳೆಯ ಕ್ರಿಕೇಟ್ ತಂಡ ಮೊದಲ ಟಿ20 ಪಂದ್ಯದಲ್ಲಿ ಡಕ್ ವರ್ತ್ ನಿಯಮದಡಿ ಸೋಲನುಭವಿಸಿದೆ. ಆದರೆ ಪಂದ್ಯದಲ್ಲಿ ಭಾರತದ ಹರ್ಲೀನ್ ಡಿಯೋಲ್ ಹಿಡಿದ ಅದ್ಭುತ ಕ್ಯಾಚ್ ಇದೀಗ ವಿಶ್ವ ಕ್ರಿಕೆಟ್ ನ್ನು ಬೆರಗುಗೊಳಿಸಿದೆ.
    ಇಂಗ್ಲೆಂಡ್ ಬ್ಯಾಟಿಂಗ್ ವೇಳೆ 18.5 ನೇ ಓವರ್ ನಲ್ಲಿ ಜೋನ್ಸ್ ಬಾರಿಸಿದ ಚೆಂಡನ್ನು ಲಾಂಗ್ ಆಫ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಹರ್ಲೀನ್ ಅದ್ಭುತವಾಗಿ ಹಿಡಿದಿದ್ದಾರೆ.


    ಜೋನ್ಸ್ ಬಾರಿಸಿದ ಚೆಂಡನ್ನು ಸಿಕ್ಸರ್ ಗೆರೆಯ ಬಳಿ ಹಾರಿ ಹಿಡಿದ ಹರ್ಲೀನ್ ಸಮತೋಲನ ತಪ್ಪಿದ ಕಾರಣ ಚೆಂಡನ್ನು ಮೇಲಕ್ಕೆಸೆದರು. ಗೆರೆ ದಾಟಿ ಮತ್ತೆ ಮೈದಾನದೊಳಗೆ ಹಾರಿ ಚೆಂಡು ನೆಲಕ್ಕೆ ತಾಗುವ ಮೊದಲೇ ಅದನ್ನು ಹಿಡಿದರು.
    ಹರ್ಲೀನ್ ಕ್ಯಾಚ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply