Connect with us

    BANTWAL

    ಮನೆ ಮೇಲೆ ಕುಸಿದ ತಡೆಗೋಡೆ – ಮಗು ಸೇರಿದಂತೆ ಇಬ್ಬರಿಗೆ ಗಾಯ

    ಬಂಟ್ವಾಳ ಜುಲೈ 10: ಕಳೆದ ಎರಡು ದಿನಗಳಿಂದ ಭಾರಿ ಮಳೆ ಸುರಿಯುತ್ತಿರುವ ಹಿನ್ನಲೆ ಮನೆಯೊಂದರ ಮೇಲೆ ತಡೆಗೋಡೆ ಕುಸಿದು ಇಬ್ಬರು ಗಾಯಗೊಂಡ ಘಟನೆ ಬಂಟ್ವಾಳ – ಮೂಡುಬಿದಿರೆ ರಸ್ತೆಯ ವಿದ್ಯಾಗಿರಿ ಬಳಿ ಶುಕ್ರವಾರ ತಡರಾತ್ರಿ ಘಟನೆ ನಡೆದಿದೆ.

    ಘಟನೆಯಲ್ಲಿ ನವೀನ್ ಎಂಬವರು ಹಾಗೂ ಅವರ ಮಗು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ನವೀನ್ ಕುಟುಂಬ ಈ ಮನೆಯಲ್ಲಿ ಬಾಡಿಗೆಗೆ ವಾಸವಿದೆ.

    ಮನೆ ಪಕ್ಕದ ಗುಡ್ಡದ ಬದಿಯಲ್ಲಿ ನಿರ್ಮಿಸಿರುವ ತಡೆಗೋಡೆ ಮಳೆ ಹಿನ್ನೆಲೆಯಲ್ಲಿ ಕುಸಿದು ಮನೆಯ ಮೇಲೆಯೇ ಬಿದ್ದಿದೆ. ಪರಿಣಾಮ ಮನೆಯ ಗೋಡೆ, ಮೇಲ್ಛಾವಣಿ‌ಗೆ ಹಾಗೂ ಮನೆಯಲ್ಲಿದ್ದ ಸೊತ್ತುಗಳಿಗೆ ಹಾನಿಯಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply