Connect with us

BANTWAL

ಕಿಯೋನಿಕ್ಸ್ ಅಧ್ಯಕ್ಷರಾಗಿ ಹರಿಕೃಷ್ಣ ಬಂಟ್ವಾಳ್ ನೇಮಕ

ಕಿಯೋನಿಕ್ಸ್ ಅಧ್ಯಕ್ಷರಾಗಿ ಹರಿಕೃಷ್ಣ ಬಂಟ್ವಾಳ್ ನೇಮಕ

ಮಂಗಳೂರು, ಜೂನ್ 13 : ಬಿಜೆಪಿ‌ ಮುಖಂಡ ಹರಿಕೃಷ್ಣ ಬಂಟ್ವಾಳ್ ಅವರನ್ನು ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (ಕಿಯೋನಿಕ್ಸ್ ) ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಇಲಾಖೆಯ ಅಧೀನ ಕಾರ್ಯದರ್ಶಿ ಸಿದ್ರಾಮಪ್ಪ ತಳವಾರ ಸರಕಾರದ ಪರವಾಗಿ ಈ ಆದೇಶ ಹೊರಡಿಸಿದ್ದಾರೆ.

ಸುದೀರ್ಘ ರಾಜಕೀಯ ಜೀವನದಲ್ಲಿರುವ ಹರಿಕೃಷ್ಣ ಬಂಟ್ವಾಳ್, ಕಾಂಗ್ರೆಸಿನಿಂದ ಬಿಜೆಪಿಗೆ ಬಂದು ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಿದ್ದರು. ಬಂಟ್ವಾಳದಲ್ಲಿ ರಾಜೇಶ್ ನಾಯ್ಕ್ ಮತ್ತು ನಳಿನ್ ಕುಮಾರ್ ಗೆಲುವಿಗೆ ಗಮನಾರ್ಹ ಶ್ರಮ ಹಾಕಿದ್ದರು. ಅದಕ್ಕು ಮುನ್ನ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವಕ್ತಾರನಾಗಿದ್ದ ಹರಿಕೃಷ್ಣ ಅವರನ್ನು ಈ ಬಾರಿ ಜಿಲ್ಲಾ ಉಪಾಧ್ಯಕ್ಷರಾಗಿ ನಿಯೋಜಿಸಲಾಗಿತ್ತು. ಇದೀಗ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮತ್ತು ಸಂಸದ ನಳಿನ್ ಕುಮಾರ್ ಶಿಫಾರಸಿನಂತೆ ಸಿಎಂ ಯಡಿಯೂರಪ್ಪ, ಹರಿಕೃಷ್ಣ ಬಂಟ್ವಾಳ್ ಗೆ ನಿಗಮದ ಹುದ್ದೆ ನೀಡಿದ್ದಾರೆ.

Facebook Comments

comments