LATEST NEWS
ದೇವಸ್ಥಾನದೊಳಗೆ ನೇಣಿಗೇರಿಸುತ್ತೇವೆ, ಜೀವಂತ ಸುಟ್ಟು ಹಾಕುತ್ತೇವೆ, ಮುಸ್ಲಿಂ ಯೂತ್ ಲೀಗ್ ಘೋಷಣೆ: ಹಿಂದೂಗಳಿಂದ ಭಾರಿ ಆಕ್ರೋಶ
ಕಾಸರಗೋಡು, ಜುಲೈ 27: ಹಿಂದೂಗಳನ್ನು ದೇವಸ್ಥಾನದೊಳಗೆ ನೇಣಿಗೇರಿಸುತ್ತೇವೆ, ಜೀವಂತ ಸುಟ್ಟು ಹಾಕುತ್ತೇವೆ ಎಂಬುದಾಗಿ ಮುಸ್ಲಿಂ ಯೂತ್ ಲೀಗ್ ಘೋಷಣೆ ಮಾಡಿರುವುದು ವಿವಾದಕ್ಕೀಡಾಗಿದ್ದು, ಹಿಂದೂಗಳಿಂದ ಭಾರಿ ಆಕ್ರೋಶಕ್ಕೂ ಕಾರಣವಾಗಿದೆ.
ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸಿ ಮುಸ್ಲಿಂ ಯೂತ್ ಲೀಗ್ ಕೇರಳದ ಕಾಸರಗೋಡು ಜಿಲ್ಲೆಯ ಕಾಂಞಗಾಡ್ನಲ್ಲಿ ನಡೆಸಿದ್ದ ರಾಲಿಯಲ್ಲಿ ಈ ಘೋಷಣೆಯನ್ನು ಕೂಗಲಾಗಿದೆ. ಈ ಆ ರಾಲಿ ಯಲ್ಲಿ ಕೆಲವರು ಹಿಂದೂಗಳನ್ನು ಉದ್ದೇಶಿಸಿ, ನಾವು ನಿಮ್ಮನ್ನು ದೇವಸ್ಥಾನದೊಳಗೇ ನೇಣಿಗೇರಿಸುತ್ತೇವೆ, ಜೀವಂತ ಸುಟ್ಟು ಹಾಕುತ್ತೇವೆ ಎಂದು ಘೋಷಣೆ ಕೂಗಿದ್ದಾರೆ.
ಈ ಹೇಳಿಕೆ ವಿರುದ್ಧ ಇದೀಗ ಬಿಜೆಪಿ ಮಾತ್ರವಲ್ಲದೆ ಹಿಂದೂಗಳಿಂದಲೂ ವಿರೋಧ ಕೇಳಿಬಂದಿದೆ. ಈ ಕುರಿತು ಬಿಜೆಪಿ ಐಟಿ ಸೆಲ್ನ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದು, ಕೇರಳದಲ್ಲಿ ಹಿಂದೂಗಳು ಹಾಗೂ ಕ್ರೈಸ್ತರಿಗೆ ಸುರಕ್ಷೆ ಇದೆಯೇ? ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ ಬೆಂಬಲವಿಲ್ಲದೆ ಇಂಥ ಹೇಳಿಕೆಗಳು ಬರಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಕೇರಳ ಬಿಜೆಪಿ ಅಧಿಕೃತ ಟ್ವಿಟರ್ ಹ್ಯಾಂಡಲ್ನಿಂದ ಈ ಕುರಿತು ರಾಹುಲ್ ಗಾಂಧಿಯನ್ನು ಗುರಿಯಾಗಿಸಿ ಟ್ವೀಟ್ ಮಾಡಲಾಗಿದೆ.