Connect with us

    LATEST NEWS

    ಕಸ್ಟಮ್ಸ್ ಅಧಿಕಾರಿಗಳಿಂದ ಅರ್ಧ ಕೆ.ಜಿ ಚಿನ್ನ ವಶ: ಒರ್ವನ ಬಂಧನ

    ಕಸ್ಟಮ್ಸ್ ಅಧಿಕಾರಿಗಳಿಂದ ಅರ್ಧ ಕೆ.ಜಿ ಚಿನ್ನ ವಶ: ಒರ್ವನ ಬಂಧನ

    ಬೆಂಗಳೂರು, ಮಾರ್ಚ್ 25 : ಕಸ್ಟಮ್ಸ್ ಅಧಿಕಾರಿಗಳು ಅರ್ಧ ಕೆ.ಜಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

    ಬೆಂಗಳೂರಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ನ ಆಯುಕ್ತ ಶಿವಪ್ರಕಾಶ್ ಬಡ್ಡಿ ನೇತೃತ್ವದ ಅಧಿಕಾರಿಗಳ ತಂಡ ಈ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

    ನಿನ್ನೆ ತಡ ರಾತ್ರಿ ಕಸ್ಟಮ್ಸ್ ಇಂಟೆಲಿಜೆನ್ಸ್ ಯುನಿಟ್ ಅಧಿಕಾರಿಗಳಿಂದ ಈ ಕಾರ್ಚರಣೆ ನಡೆದಿದೆ.

    Bengaluru’s Kempegowda International Airport

    ಮುಂಬೈ ಮೂಲದ 40 ವರ್ಷ ವಯಸ್ಸಿನ ವ್ಯಕ್ತಿಯನ್ನು ಬಂಧಿಸಲಾಗಿದ್ದು, ದುಬೈನಿಂದ ಬೆಂಗಳೂರಿಗೆ ಇಂಡಿಗೋ ವಿಮಾನದಲ್ಲಿ ಈ ಚಿನ್ನ ಸಾಗಿಸುತ್ತಿದ್ದ ಎನ್ನಲಾಗಿದೆ.

    ಹೆಣ್ಣು ಮಕ್ಕಳ ಚಪ್ಪಲಿ, ಸೌಂದರ್ಯ ಆಭರಣಗಳಲ್ಲಿ ಈ ಚಿನ್ನವನ್ನು ಅಡಗಿಸಿಟ್ಟು ಸಾಗಿಸಲು ಈ ವ್ಯಕ್ಕಿ ಪ್ರಯತ್ನಿಸಿದ್ದು, ಇದೀಗ ವಿಫಲವಾಗಿ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.

    Share Information
    Advertisement
    Click to comment

    You must be logged in to post a comment Login

    Leave a Reply