LATEST NEWS
ಕೆಲಸ ಮಾಡದ ಅಧಿಕಾರಿಗಳು ಕೊನೆಗೆ ಖುದ್ದು ನಿಂತು ತುರ್ತು ದುರಸ್ತಿ ಮಾಡಿಸಿದ ಶಾಸಕ ಹಾಲಾಡಿ
ಕುಂದಾಪುರ ಅಗಸ್ಟ್ 10:ಜಿಲ್ಲೆಯ ಸಂಸದರಿದ್ದರೂ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯನ್ನು ಸರಿಪಡಿಸಲು ಕೊನೆಗೆ ಸ್ಥಳೀಯ ಶಾಸಕರೊಬ್ಬರು ತಮ್ಮ ಸ್ವಂತ ಹಣವನ್ನು ಉಪಯೋಗಿಸಬೇಕಾದ ಪರಿಸ್ಥಿತಿ ಉಡುಪಿ ಜಿಲ್ಲೆಯಲ್ಲಿ ಬಂದಿದೆ.
ಕುಂದಾಪುದಲ್ಲಿ ಸರ್ವೀಸ್ ರಸ್ತೆಯ ದುರಸ್ತಿಯಿಂದಾಗುತ್ತಿರುವ ಸಮಸ್ಯೆಗೆ ಮುಕ್ತಿ ನೀಡಲು ಖುದ್ದು ಶಾಸಕ ಹಾಲಾಡಿಯವರು ತಮ್ಮ ಸ್ವಂತ ಹಣದಲ್ಲಿ ಕಾಮಗಾರಿಯನ್ನು ಮುಂದೆ ನಿಂತು ಮಾಡಿಸಿದ್ದಾರೆ. ಕುಂದಾಪುರ ತಾಲೂಕಿನಲ್ಲಿ ವಿಪರೀತ ಮಳೆ ಸುರಿಯುತ್ತಿದ್ದು ನವಯುಗ ಕಂಪೆನಿಯ ಅವ್ಯವಸ್ಥೆಯ ಕಾಮಗಾರಿಯಿಂದ ನಗರದ ಶಾಸ್ತ್ರಿ ಸರ್ಕಲ್ ನಿಂದ ಹಂಗಾರಕಟ್ಟೆಯವರೆಗೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.
ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಡಕು ಉಂಟಾಗುತ್ತಿದ್ದು ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರು ಸೋಮವಾರ ಬೆಳ್ಳಗಿನಿಂದಲೇ ನಗರ ಬಸ್ರೂರು, ಮೂರುಕೈ ಪ್ರದೇಶದಲ್ಲಿ ಮೊಕ್ಕಾಂ ಹೂಡಿ ಹೆದ್ದಾರಿಯಲ್ಲಿ ನಿಂತ ನೀರನ್ನು ಸುಗಮವಾಗಿ ಹರಿದು ಹೋಗುವಂತೆ ಜೆಸಿಬಿ ನಿಂತ ಮಣ್ಣನ್ನು ತೆಗೆಸಿದರು. ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗದಂತೆ ಸುಗಮ ಸಂಚಾರಕ್ಕೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕುಂದಾಪುರದ ಬಸ್ರೂರಿನಲ್ಲಿ ಇದೇ ರೀತಿ ಸಮಸ್ಯೆಗೆ ಸ್ಥಳೀಯರು ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ರಸ್ತೆಯಲ್ಲೇ ಅಡ್ಡ ಹಾಕಿ ಸಮಸ್ಯೆ ಬಗ್ಗೆ ತಿಳಿಸಿದ್ದರು. ಈ ಹಿನ್ನಲೆ ಸಚಿವರು ಅಧಿಕಾರಿಗಳು ಕೂಡಲೇ ಸಮಸ್ಯೆ ಬಗೆಹರಿಸಲು ಸೂಚಿಸಿದ ಕೆಲವೇ ಗಂಟೆಗಳಲ್ಲಿ ಅಧಿಕಾರಿಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಲ್ಲುವ ಸಮಸ್ಯೆ ಬಗೆಹರಿಸಿದ್ದರು.