LATEST NEWS
ಹಜ್ ಯಾತ್ರಿಕರ ಸಬ್ಸಿಡಿ ಹಣ ರದ್ದು, ಕೇಂದ್ರದ ನಿರ್ಧಾರ ಸ್ವಾಗತಾರ್ಹ : ಸಚಿವ ಖಾದರ್

ಹಜ್ ಯಾತ್ರಿಕರ ಸಬ್ಸಿಡಿ ಹಣ ರದ್ದು, ಕೇಂದ್ರದ ನಿರ್ಧಾರ ಸ್ವಾಗತಾರ್ಹ : ಸಚಿವ ಖಾದರ್
ಮಂಗಳೂರು, ಜನವರಿ 17 : ಹಜ್ ಯಾತ್ರಿಕರಿಗೆ ನೀಡುತ್ತಿದ್ದ ಸಬ್ಸಿಡಿ ಹಣವನ್ನು ರದ್ದು ಮಾಡಿದ ಕೇಂದ್ರ ಸರ್ಕಾರದ ಕ್ರಮವನ್ನು ಆಹಾರ ಸಚಿವ ಯು.ಟಿ. ಖಾದರ್ ಅವರು ಸ್ವಾಗತಿಸಿದ್ದಾರೆ.
ಮಂಗಳೂರಿನಲ್ಲಿ ಈ ಬಗ್ಗೆ ಪ್ರತಿಕ್ರೀಯಿಸಿರುವ ಅವರು ಕೇಂದ್ರ ಸರಕಾರದ ಹಜ್ ಸಬ್ಸಿಡಿ ರದ್ದು ವಿಚಾರ ನಿಜವಾಗಿಯೂ ಸ್ವಾಗತಾರ್ಹ.

ಈ ಸಬ್ಸಿಡಿಯಿಂದ ಏರ್ ಇಂಡಿಯಾ ಕಂಪನಿಗೆ ಲಾಭವಾಗುತ್ತಿತ್ತು ವಿನಾ: ಹಜ್ ಯಾತ್ರಿಕರಿಗೆ ಯಾವುದೇ ಲಾಭ ಇರಲಿಲ್ಲ.
ಈ ನಿಯಮದಿಂದ ಏರ್ ಇಂಡಿಯಾ ವಿಮಾನದಲ್ಲೇ ಹಜ್ ಗೆ ಹೋಗಬೇಕೆಂಬ ನಿಯಮಗಳಿತ್ತು.
ಆದರೆ, ಈಗ ಇತರ ವಿಮಾನಗಳಲ್ಲಿ ಕಡಿಮೆ ದರಕ್ಕೆ ಹಜ್ ತೆರಳಬಹುದಾಗಿದೆ ಎಂದರು.
ಹಜ್ ಗೆ ಹೋಗವವರು ಯಾರೂ ಕೇಂದ್ರ ಸರ್ಕಾರದ ಸಬ್ಸಿಡಿ ಹಣ ಬಗ್ಗೆ ಕಾದು ಕುಳಿತಿಲ್ಲ ಎಂದ ಅವರು ಕೇಂದ್ರದ ನಿರ್ಧಾರವನ್ನು ಮುಸ್ಲಿಂ ಸಮುದಾಯವೂ ಸ್ವಾಗತಿಸಿದೆ.
ಯಾವುದೋ ಕಾಲದಲ್ಲಿ ಸಬ್ಸಿಡಿ ಜಾರಿಯಾಗಿತ್ತು. ಸಬ್ಸಿಡಿ ರದ್ದಿನಿಂದ ಹಜ್ ಪ್ರಯಾಣಿಕರಿಗೆ ತುಂಬಾ ಪ್ರಯೋಜನವಿದ್ದು, ಜನರು ಇಷ್ಟ ಬಂದ ವಿಮಾನದಲ್ಲಿ ಹಜ್ ಗೆ ಹೋಗಲು ಸಾಧ್ಯವಾಗುವುದು ಎಂದು ಅಭಿಪ್ರಾಯಪಟ್ಟ ಖಾದರ್ ಇನ್ನೊಂದು ವರ್ಗವನ್ನು ತುಷ್ಟೀಕರಿಸುವ ಪ್ರಯತ್ನ ಸರಿಯಲ್ಲ.
ಜನರ ಮಧ್ಯೆ ಸಂಶಯ ಮೂಡಿಸುವ ಕೆಲಸ ಯಾವುದೇ ಸರಕಾರದಿಂದ ಆಗಬಾರದು ಎಂದೂ ಇದೇ ಸಂದರ್ಭದಲ್ಲಿ ನುಡಿದರು.