Connect with us

LATEST NEWS

ಗುಜರಾತ್‌ನಲ್ಲಿ ಭಾರಿ ಮಳೆಗೆ ಬಹುಮಹಡಿ ಕಟ್ಟಡ ಕುಸಿತ, 7 ಮಂದಿ ಮೃತ್ಯು..!

ಸೂರತ್ :  ಧಾರಾಕಾರ ಮಳೆಯಿಂದ ಬಹುಮಹಡಿ ಕಟ್ಟಡವೊಂದು ಕುಸಿದು ಸಂಭವಿಸಿದ ದುರಂತದಲ್ಲಿ 7 ಮಂದಿ ಮೃತಪಟ್ಟು, ಹಲವು ಮಂದಿ ಅವಶೇಷಗಳಡಿ ಸಿಕ್ಕಿಹಾಕಿಕೊಂಡ ಘಟನೆ ಗುಜರಾತ್‍ನ ಸೂರತ್ ನಗರದ ಸಚಿನ್ ಪಾಲಿ ಗ್ರಾಮದಲ್ಲಿ ನಡೆದಿದೆ.

ಅವಶೇಷಗಳಡಿಯಲ್ಲಿ ಸಿಕ್ಕಿಕೊಂಡಿದ್ದ ಒಬ್ಬ ಮಹಿಳೆಯನ್ನು ಜೀವಂತವಾಗಿ ಹೊರತೆಗೆಯಲಾಗಿದ್ದು,ಕೆಲವು ಮಂದಿ ಘಟನೆಯಲ್ಲಿ ಗಾಯಗೊಂಡಿದ್ದಾರೆ . ಈ ಕಟ್ಟಡದಲ್ಲಿ 30 ಅಪಾರ್ಟ್‍ಮೆಂಟ್‍ಗಳಿದ್ದು, ಐದರಲ್ಲಿ ಮಾತ್ರ ಜನ ವಾಸವಿದ್ದರು.  ಈ ಕಟ್ಟಡವನ್ನು ಕೇವಲ ಎಂಟು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು, ಕಾಂಕ್ರಿಟ್ ಸ್ಲ್ಯಾಬ್‍ಗಳು ಒಂದರ ಮೇಲೊಂದರಂತೆ ಅವಶೇಷಗಳ ಪರ್ವತದಲ್ಲಿ ಬಿದ್ದಿರುವ ದೃಶ್ಯಗಳ ವಿಡಿಯೊ ತುಣುಕುಗಳು ಮೈ ಜುಮ್ಮೆನಿಸುತ್ತಿವೆ. ಕಟ್ಟಡ ಕುಸಿದ ಸಂದರ್ಭದಲ್ಲಿ ಐದು ಕುಟುಂಬಗಳು ಕಟ್ಟಡದ ಒಳಗೆ ಇದ್ದವು ಎನ್ನಲಾಗಿದೆ. ಅಗ್ನಿಶಾಮಕ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ. ಧ್ವಂಸಗೊಂಡಿರುವ ಕಟ್ಟಡದ ಅವಶೇಷಗಳಡಿ ಸಿಕ್ಕಿಕೊಂಡಿರುವವರ ರಕ್ಷಣೆಗಾಗಿ ಅಧಿಕಾರಿಗಳು ಹರಸಾಹಸ ನಡೆಸಿದ್ದು, ಒಂದು ಮೃತ ದೇಹವನ್ನು ಅವಶೇಷಗಳಡಿಯಿಂದ ಹೊರತೆಗೆಯುತ್ತಿರುವ ದೃಶ್ಯ ಕಂಡುಬಂದಿದೆ.

https://x.com/i/status/1809769287013273750

Share Information
Continue Reading
Advertisement
Click to comment

Leave a Reply

Your email address will not be published. Required fields are marked *